ಸನ್ಮಾರ್ಗ ವಾರ್ತೆ
ಪ್ರಧಾನಿ ನರೇಂದ್ರ ಮೋದಿಯಿಂದ ಕಾಂಗ್ರೆಸ್ಸಿಗೆ ಕಲಿಯಬೇಕಾದದ್ದು ಏನೂ ಇಲ್ಲ. ಅವರು ಸಂವಿಧಾನವನ್ನು ನಿರ್ಲಕ್ಷಿಸಿದ್ದ ಚಿಂತನ ಪರಂಪರೆಯಿಂದ ಬಂದವರು.. ಆರ್ ಎಸ್ ಎಸ್ ತಮ್ಮ ಸಂಪಾದಕೀಯದಲ್ಲಿ ಸ್ಪಷ್ಟವಾಗಿ ಸಂವಿಧಾನವನ್ನು ತಿರಸ್ಕರಿಸುತ್ತೇವೆ ಎಂದು ಬರೆದಿತ್ತು ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ 150ಕ್ಕೂ ಹೆಚ್ಚು ಪ್ರತಿಭಟನೆಗಳನ್ನು ನಡೆಸಿದ್ದರು. ನಾವು ಸಂವಿಧಾನವನ್ನು ಸಂಪೂರ್ಣ ತಿರಸ್ಕರಿಸುತ್ತೇವೆ. ದೇಶದ ಸಂವಿಧಾನವಾಗಿ ಮನುಸ್ಮೃತಿಯೇ ಬೇಕು ಎಂದು ಹೇಳಿದ್ದರು. ಅಂತಹ ಹಿನ್ನೆಲೆಯವರಿಂದ ನಮಗೆ ಸಂವಿಧಾನದ ಪಾಠ ಬೇಕೆ? ಸಂಸತ್ತು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೀವು ನೋಡುತ್ತಿಲ್ಲವೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
1950ರಲ್ಲಿ ಭಾರತೀಯ ಸಂವಿಧಾನ ಅಂಗೀಕರಿಸಲ್ಪಟ್ಟಾಗ ಆರ್ ಎಸ್ ಎಸ್ ಅದನ್ನು ವಿರೋಧಿಸಿತ್ತು ಎಂದು ಅವರು ಹೇಳಿದ್ದಾರೆ.












