ಪಥಸಂಚಲನದಿಂದ ಸ್ಥಬ್ಧಚಿತ್ರ ಹೊರಕ್ಕೆ: ತಮಿಳರ ದೇಶಪ್ರೇಮವನ್ನು ಅವಮಾನಿಸಲಾಗಿದೆ- ಮುಖ್ಯಮಂತ್ರಿ ಎಂ.ಕೆ.‌ ಸ್ಟಾಲಿನ್

0
221

ಸನ್ಮಾರ್ಗ ವಾರ್ತೆ

ಚೆನ್ನೈ: ರಿಪಬ್ಲಿಕ್ ದಿನದ ಪರೇಡ್‍ನಿಂದ ತಮಿಳುನಾಡಿನ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ದೂರವಿಟ್ಟಿದೆ. ಕೇಂದ್ರದ ಈ ಕ್ರಮವನ್ನು ಖಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮಿಳರ ದೇಶಪ್ರೇಮವನ್ನು ಅಪಮಾನಿಸಲಾಗಿದೆ ಎಂದು ಟೀಕಿಸಿದ್ದಾರೆ.

ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ತಮಿಳುನಾಡಿನ ಸ್ಥಬ್ಧಚಿತ್ರವನ್ನು ಹೊರಗಿಟ್ಟಿರುವುದು ತಮಿಳರ ಭಾವನೆಗೆ ನೋವು ತಂದಿದೆ ಮತ್ತು ದೇಶ ಪ್ರೇಮಕ್ಕೆ ಘಾಸಿಯುಂಟು ಮಾಡಲಾಗಿದೆ ಎಂದು ಅವರು ಅಪಾದಿಸಿದ್ದಾರೆ.

ತಜ್ಞ ಸಮಿತಿಯ ಸದಸ್ಯರು ಸೂಚನೆಯಿಂದ ಪರಿಷ್ಕರಿಸಿದ ಏಳು ವಿನ್ಯಾಸಗಳನ್ನು ತಿರಸ್ಕರಿಸಿದ್ದು, ಅಂಗೀಕರಿಸುವಂತಹ ವಿಷಯವಲ್ಲ. ತಮಿಳ್ನಾಡಿನ ಜನರು ಬಹಳ ಆತಂಕಗೊಳ್ಳುವ ವಿಷಯವಿದು. ತಮಿಳ್ನಾಡಿನ ಸ್ಥಬ್ಧಚಿತ್ರವನ್ನು ಸೇರಿಸಲು ಪ್ರಧಾನಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು. ಕೇಂದ್ರ ತೀರ್ಮಾನವನ್ನು ಸಂಸದೆ ಕನಿಮೊಳಿ ಸಹಿತ ಡಿಎಂಕೆ ಮಿತ್ರ ಪಕ್ಷದ ನಾಯಕರು ಟೀಕಿಸಿದ್ದಾರೆ.

ರಿಪಬ್ಲಿಕ್ ಪರೇಡಿನಲ್ಲಿ ರಾಣಿ ವೆಲು ನಾಚಿಯಾರ್, VO ಚಿದಂಬರಂ ಪಿಳ್ಳೆ, ಮಹಾಕವಿ ಭಾರತೀಯಾರ್ ಯಾನೆ ಸುಬ್ರಮಣ್ಯ ಭಾರತಿ ಸಹಿತ ಸ್ವಾತಂತ್ರ್ಯ ಸಮರ ಹೋರಾಟಗಾರರನ್ನೊಳಗೊಂಡ ಸ್ಥಬ್ಧಚಿತ್ರವನ್ನು ತಮಿಳ್ನಾಡು ಸಿದ್ಧಪಡಿಸಿತ್ತು. ದಕ್ಷಿಣ ಭಾರತದಿಂದ ಬಿಜೆಪಿ ಆಡಳಿತ ಇರುವ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೇರಳ, ಪ.ಬಂಗಾಳ ರಾಜ್ಯಗಳ ಸ್ತಬ್ಧಚಿತ್ರಗಳನ್ನೂ ಕೂಡ ನಿರಾಕರಿಸಲಾಗಿದೆ. ಕೇರಳದ ನಾರಾಯಣಗುರು ಸ್ತಬ್ಧಚಿತ್ರ ಮತ್ತು ಪ.ಬಂಗಾಳದ ನೇತಾಜಿ ಸುಭಾಶ್ ಚಂದ್ರ ಬೋಸ್‍ರ ಟೆಬ್ಲೋ‌ಗಳಿಗೆ ಅವಕಾಶ ನೀಡಲಾಗಿಲ್ಲ.