ಉಡುಪಿ: ಫತಾವುಲ್ಲಾ ಸಾಹೇಬ್ ಎಫ್.ಎಂ ರಿಗೆ UAEಯ ಪ್ರತಿಷ್ಠಿತ ಗೋಲ್ಡನ್ ವೀಸಾ

0
543

ಸನ್ಮಾರ್ಗ ವಾರ್ತೆ

ಅಬುಧಾಬಿ: ದುಬೈ ಇನ್ವೆಸ್ಟ್‌ಮೆಂಟ್ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಫತಾವುಲ್ಲಾ ಸಾಹೇಬ್ ಎಫ್.ಎಂ ಅವರು ಯುಎಇ ನೀಡುವ ಪ್ರತಿಷ್ಠಿತ ಗೋಲ್ಡನ್ ವೀಸಾವನ್ನು ಸ್ವೀಕರಿಸಿದ್ದಾರೆ. ಫತಾವುಲ್ಲಾ ಉಡುಪಿ ಜಿಲ್ಲೆಯ ತೋನ್ಸೆ ಮೂಲದವರಾಗಿದ್ದು, USA ಯಿಂದ MBA, CPA ಅರ್ಹತೆ ಪಡೆದಿದ್ದಾರೆ. ಅವರು ಮಂಗಳೂರು ಪಾಲಿಪ್ಯಾಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಸಲಹೆಗಾರರು ಮತ್ತು ದುಬೈನ ತೋನ್ಸೆ ಕಲ್ಚರಲ್ ಅಸೋಸಿಯೇಶನ್‌ನ ಪೋಷಕರಾಗಿದ್ದಾರೆ.

ಫತಾವುಲ್ಲಾರವರು ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯುಎಇಯಲ್ಲಿ ಕಳೆದ 15 ವರ್ಷಗಳಿಂದ ಸಲ್ಲಿಸುತ್ತಿರುವ ಅವರ ಅರ್ಹತೆಗಳು, ಕಾರ್ಯನಿರ್ವಾಹಕ ಹುದ್ದೆಗಳು ಮತ್ತು ಸೇವೆಗಳನ್ನು ಗುರುತಿಸಿ ಅವರಿಗೆ ದುಬೈ ಗೋಲ್ಡನ್ ವೀಸಾದ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.

ಯುಎಇ ಗೋಲ್ಡನ್ ವೀಸಾ ದೀರ್ಘಾವಧಿ ನಿವಾಸಿ ವೀಸಾ ವ್ಯವಸ್ಥೆಯಾಗಿದ್ದು, ಐದರಿಂದ 10 ವರ್ಷಗಳವರೆಗೆ ಇದನ್ನು ವಿಸ್ತರಿಸಲಾಗುತ್ತದೆ ಮತ್ತು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ. ವಿವಿಧ ಕ್ಷೇತ್ರಗಳ ಸಾಧಕರು, ವೃತ್ತಿಪರರು, ಹೂಡಿಕೆದಾರರು ಮತ್ತು ಭರವಸೆಯ ಸಾಮರ್ಥ್ಯ ಹೊಂದಿರುವವರಿಗೆ ಇದನ್ನು ನೀಡಲಾಗುತ್ತದೆ.