ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಫೆ. 28: ಜಗತ್ತಿನಾದ್ಯಂತ ಕೊರೊನಾ ಭೀತಿ ಹರಡುತ್ತಿದ್ದು ವೈರಸ್ ಬಾಧೆಯನ್ನು ತಡೆಯುವ ಮಾರ್ಗಸೂಚಿಯೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಬಂದಿದ್ದಾರೆ. ಎಲ್ಲರೂ ತನ್ನಂತೆ ಶುಚಿತ್ವವುಳ್ಳವರಾಗಬೇಕೆಂದು ವೈಟ್ ಹೌಸ್ನಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಕರೆ ನೀಡಿದರು. ಏನೇ ಮಾಡಿದರೂ ಆಗಾಗ ಕೈಯನ್ನು ಸಾಬೂನಿನಿಂದ ಟ್ರಂಪ್ ತೊಳೆಯುತ್ತಾರೆ. ತನ್ನ ಗುಣದೋಷ ಎಂದು ಹೇಳುವ ಇದನ್ನೇ ಈ ವೈರಸ್ನಿಂದ ಪಾರಾಗಲು ನೀವು ಮಾಡಬೇಕು ಎಂದು ಟ್ರಂಪ್ ಮಾರ್ಗದರ್ಶನ ಮಾಡಿದರು. ಶುಚಿತ್ವದ ವಿಷಯದಲ್ಲಿ ತಾನಜೊಮೊ ಫೋಬ್(ಕೀಟಾನಗಳ ಕುರಿತು ಅತಿಶ್ರದ್ಧೆ ವಹಿಸುವವರನ್ನು ಹೀಗೆ ಕರೆಯಲಾಗುತ್ತದೆ) ಎಂದು ಟ್ರಂಪ್ ಹೇಳುತ್ತಾರೆ. ನಿರಂತರ ಕೈತೊಳೆಯಿರಿ. ಶುಚಿಯಾಗಿರಿ. ನಡೆಯುವಾಗ ಕೈಬೆರಳುಗಳು ಸ್ಪರ್ಶಿಸಬೇಕೆಂದು ಯಾವುದೇ ನಿರ್ಬಂಧವಿಲ್ಲ. ಯಾರಾದರೂ ಕೆಮ್ಮಿದರೆ ನಾನು ಅಲ್ಲಿಂದ ಬಹಳ ಬೇಗನೆ ದೂರ ನಿಲ್ಲುವೆ ಮತ್ತು ಇತ್ತೀಚೆಗೆ ತಾನು ಅನುಭವಿಸಿದ ಒಂದು ಘಟನೆಯನ್ನು ಅವರು ವಿವರಿಸಿದರು.
ಒಂದು ವಾರದ ಹಿಂದೆ ಒಬ್ಬರು ನನ್ನನ್ನು ಭೇಟಿಯಾಗಲು ಬಂದರು. ಬಹಳ ವರ್ಷಗಳಿಂದ ಕಾಣಸಿಗದ ಗೆಳೆಯನೊಂದಿಗೆ ಕುಶಲ ವಿಚಾರಿಸಿದೆ. ತಾನು ಸುಖಿಯಾಗಿದ್ದೇನೆ ಎಂದು ಅವರು ಹೇಳಿದರು. ನನ್ನನ್ನು ಅಭಿನಂದಿಸುವ ವೇಳೇ ಪುನಃ ಕೇಳಿದೆ- ನೀವು ನಿಜಕ್ಕೂ ಸೌಖ್ಯವಾಗಿದ್ದೀರಾ? ತೀವ್ರ ಜ್ವರ ಇದೆ ಎಂದು ಹೇಳಿದರು. ವೈರಲ್ ಜ್ವರದೊಂದಿಗೆ ಅವರು ನನಗೆ ಹಸ್ತದಾನ ಮಾಡಿದರು. ಅಭಿನಂದಿಸಿದರು. ಕೂಡಲೇ ಅವರ ಅನುಮತಿ ಕೇಳಿ ಒಳಗೆ ಹೋಗಿ ಕೈಯನ್ನು ಸಾಬೂನಿನಿಂದ ತೊಳೆದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದರು.












