ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.13: ಐಎನ್ಎಕ್ಸ್ ಮೀಡಿಯ ಪ್ರಕರಣದಲ್ಲಿ ಎಂಫೋರ್ಸ್ಮೆಂಟ್ ಡೈರಕ್ಟರೇಟ್ ಮುಂದೆ ಶರಣಾಗಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರು ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ರೋಸ್ ಅವನ್ಯೂ ಕೋರ್ಟು ತಿರಸ್ಕರಿಸಿದೆ.
ಸಿಬಿಐ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಪ್ಪು ಹಣ ಬಿಳಿ ಮಾಡಿದ ಘಟನೆಯಲ್ಲಿ ಎಂಫೋರ್ಸ್ಮೆಂಟ್ ಡೈರಕ್ಟರೇಟ್ ಚಿದಂಬರಂ ವಿರುದ್ಧ ಕೇಸು ಹಾಕಿದೆ. ಸಿಬಿಐ ಭ್ರಷ್ಟಾಚಾರ ಕೇಸು ಸಿಬಿಐ ದಾಖಲಿಸಿದೆ.
ಇಡಿ ಚಿದಂಬರಂರರನ್ನು ಅವಶ್ಯಕ ಸಮಯದಲ್ಲಿ ಬಂಧಿಸಬಹುದು ಎಂದು ಕೋರ್ಟಿಗೆ ತಿಳಿಸಿತ್ತು. ನ್ಯಾಯಾಂಗ ಕಸ್ಟಡಿಯಲ್ಲಿ ಚಿದಂಬರಂ ಇರುವುದರಿಂದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಿಲುವು ವ್ಯಕ್ತಪಡಿಸಿದ್ದರು.












