ವಾಷಿಂಗ್ಟನ್,ಜೂ.22: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಹೊಸ ಲೈಂಗಿಕ ಆರೋಪ ಹೊರಿಸಲಾಗಿದೆ. ಮ್ಯಾಗಝಿನ್ ಕಾಲಮಿಸ್ಟ್
ಇಜಿನ್ ಕರೋಲ್ ಟ್ರಂಪ್ ನ್ಯೂಯಾರ್ಕಿನ ಅದ್ದೂರಿ ಡಿಪಾರ್ಟ್‍ಮೆಂಟ್ ಸ್ಟೋರಿನಲ್ಲಿ ಅಸಭ್ಯವಾಗಿ ವರ್ತಿಸಿದರು ಎಂದು ಕರೋಲ್ ಹೇಳಿದರು.
1990ರಲ್ಲಿ ನಡೆದ ಘಟನೆಯ ಕುರಿತು ತನ್ನ ಹೊಸ ಪುಸ್ತಕದಲ್ಲಿ ಬರೆದಿದ್ದಾರೆ.ವಾಟ್ ಡು ನೀಡ್ ಮೆನ್ ಫೋರ್ ಎ ಮೊಡಸ್ಟ್ ಪ್ರೊಪಸಲ್ ಎಂಬ ಪುಸ್ತಕದಲ್ಲಿ 23 ವರ್ಷಗಳ ಹಿಂದೆ ಡ್ರೆಸಿಂಗ್ ರೂಮ್‍ನಲ್ಲಿ ಟ್ರಂಪ್ ಅಸಭ್ಯವಾಗಿ ವರ್ತಿಸಿದರೆಂದು ಕರೋಲ್ ಹೇಳಿದ್ದಾರೆ.
ಇದೇ ವೇಳೆ ಕರೋಲ್‍ರ ಆರೋಪವನ್ನು ಟ್ರಂಪ್ ನಿರಾಕರಿಸಿದ್ದಾರೆ. ಜೀವನದಲ್ಲೆಂದು ಕರೋಲ್‍ರನ್ನು ಭೇಟಿಯಾಗಿಲ್ಲ. ಪುಸ್ತಕ ಮಾರಿಕೊಳ್ಳಲು ಕರೋಲ್ ಮಾಡಿದ ತಂತ್ರ ಎಂದು ಟ್ರಂಪ್ ಹೇಳಿದರು. ಈವರೆಗೆ ಸುಮಾರು 15 ಮಹಿಳೆಯರು ಟ್ರಂಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ.












