ಅಸ್ಸಾಂನಲ್ಲಿ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿ ಜೈಶ್ರೀರಾಂ ಹೇಳಿಸಿದ ದುಷ್ಕರ್ಮಿಗಳು

0
1094

ಗುವಾಹಟಿ, ಜೂ. 21: ಅಸ್ಸಾಂ ಬರಪೆಟಾ ಎಂಬಲ್ಲಿ ಬಲಪಂಥೀಯ ಸಂಘಟನೆಯ ವಿರುದ್ಧ ಗುರುವಾರ ಮುಸ್ಲಿಂ ಯುವಕನಿಗೆ ಹಲ್ಲೆ ಮತ್ತು ಬಲವಂತದಿಂದ ಜೈಶ್ರೀರಾಂ ಹೇಳಿಸಿದ ಆರೋಪದಲ್ಲಿ ದೂರು ದಾಖಲಾಗಿದೆ. ಈ ಯುವಕನಲ್ಲಿ ಪಾಕಿಸ್ತಾನ್ ಮುರ್ದಬಾದ್ ಎಂದು ಘೋಷಣೆ ಕೂಗುವಂತೆ ಬಲವಂತಪಡಿಸಿದ್ದಾರೆ. ಆಲ್ ಅಸ್ಸಾಂ ಮೈನಾರಿಟಿ ಸ್ಟೂಡೆಂಟ್ಸ್ ಯೂನಿಯನ್ ಮತ್ತು ನಾರ್ಥ್ -ಈಸ್ಟ್ ಮೈನಾರಿಟಿ ಸ್ಟೂಡೆಂಟ್ಸ್ ಯೂನಿಯನ್ ಬಲಪಂಥೀಯ ಸಂಘಟನೆ ಮತ್ತು ಅದರ ಸ್ಥಾಪಕನ ವಿರುದ್ಧ ದೂರು ನೀಡಿದೆ. ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿ ಬಲವಂತದಿಂದ ಜೈಶ್ರೀರಾಂ ಹೇಳಿಸಿದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಘಟನೆ ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಪಂಥೀಯ ಸಂಘಟನೆ ಸೇರಿದ ಸದಸ್ಯರು ಬರಾಪೆಟದಲ್ಲಿ ಆಟೋರಿಕ್ಷಾವನ್ನು ನಿಲ್ಲಿಸಿ ಅದರಲ್ಲಿದ್ದ ವಿದ್ಯಾರ್ಥಿಗೆ ಹಲ್ಲೆ ನಡೆಸಿದರು. ನಂತರ ಜೈಶ್ರೀಂ, ಭಾರತ್‍ ಮಾತಾಕಿ ಜೈ, ಪಾಕಿಸ್ತಾನ್ ಮುರ್ದಾಬಾದ್ ಘೋಷಣೆಯನ್ನು ಬಲವಂತದಿಂದ ಹೇಳಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ವಿದ್ಯಾರ್ಥಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ತಾವೇ ವೀಡಿಯೊವನ್ನು ಚಿತ್ರಿಸಿ ವೈರಲ್ ಮಾಡಿದ್ದರು. ಬರಾಪೆಟಾ ಸಂಸತ್ಸದಸ್ಯ ಅಬ್ದುಲ್ ಖಾಲಿಕ್ ಘಟನೆಯಲ್ಲಿ ಕ್ರಮ ಜರಗಿಸುವಂತೆ ಪೊಲೀಸ್ ಅಧಿಕಾರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.