ಈಗ ಡೊನಾಲ್ಡ್ ಟ್ರಂಪ್‍ರಿಂದ ವಿಶ್ವ ಆರೋಗ್ಯ ಸಂಘಟನೆಗೂ ಬೆದರಿಕೆ

0
1340

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ. 8: ಕೊರೊನಾ ವೈರಸ್ ಭೀತಿಜನಕವಾಗಿ ಹಾವಳಿ ನಡೆಸುತ್ತಿರುವ ವೇಳೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಬೆದರಿಕೆಯನ್ನು ಮುಂದುವರಿಸಿದ್ದಾರೆ. ಈಗ ವಿಶ್ವ ಆರೋಗ್ಯ ಸಂಘಟನೆ ಚೀನಕ್ಕೆ ಅನುಕೂಲ ಮಾಡುವ ನಿಲುವು ಕೈಗೊಂಡಿದೆ ಎಂಬುದು ಅವರ ಕೋಪಕ್ಕೆ ಕಾರಣವಾಗಿದ್ದು ರೋಗಬಾಧೆಯನ್ನು ತಡೆದು ನಿಲ್ಲಿಸುವಲ್ಲಿ ವಿಶ್ವ ಆರೋಗ್ಯ ಸಂಘಟನೆ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ ಈ ಸಂಘಟನೆಗೆ ಅಮೆರಿಕ ಕೊಡುವ ಧನ ಸಹಾಯವನ್ನು ನಿಲ್ಲಿಸುವೆ ಎಂದು ವೈಟ್ ಹೌಸಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬೆದರಿಕೆ ಹಾಕಿದ್ದಾರೆ. ವಿಶ್ವಆರೋಗ್ಯ ಸಂಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ ಅವರು ಕೊರೊನ ವ್ಯಾಪಿಸುವುದನ್ನು ತಡೆಯುವಲ್ಲಿ ಅಮೆರಿಕ ವಿಫಲವಾಗಿದ್ದನ್ನು ವಿಶ್ವಾರೋಗ್ಯ ಸಂಘಟನೆ ಎತ್ತಿತೋರಿಸಿದ್ದಕ್ಕೆ ಕುಪಿತರಾಗಿದ್ದಾರೆ.

ಇದೇ ವೇಳೆ ಅಮೆರಿಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ ನಾಲ್ಕು ಲಕ್ಷ ದಾಟಿದೆ. ಇದುವರೆಗೆ 12,854 ಮಂದಿ ಮೃತಪಟ್ಟಿದ್ದಾರೆ. 21,674 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.