ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.14: ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಗ್ರಹಿಸಿದ್ದಾರೆ. “ಯುದ್ಧ ಬಯಸುವುದಿಲ್ಲವಾದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಹಸ್ತಾಂತರಿಸುವುದು ಉತ್ತಮ. ಇಮ್ರಾನ್ ಖಾನ್ ಪಾಕಿಸ್ತಾನದ ಹಿತಾಸಕ್ತಿಯನ್ನು ಮುಂದಿಟ್ಟು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಸ್ತಾಂತರಿಸುವರೆಂದು ನಿರೀಕ್ಷಿಸುತ್ತೇನೆ” ಎಂದು ಅವರು ಹೇಳಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ಪಾಕಿಸ್ತಾನದ ಜೊತೆ ನಿಲ್ಲುವ ಇಚ್ಛೆಯಿಲ್ಲ. ಅವರಿಗೆ ಭಾರತದೊಂದಿಗೆ ಸೇರುವ ಇಚ್ಛೆಯಿದೆ. ಕಳೆದ ಎಪ್ಪತ್ತು ವರ್ಷಗಳಿಂದ ಕಾಶ್ಮೀರದ ಮೂರನೆ ಒಂದು ಭಾಗ ಪಾಕಿಸ್ತಾನದ ವಶದಲ್ಲಿದೆ. ಇದು ಗಂಭೀರ ವಿಷಯವೆಂದು ಅಠಾವಳೆ ಹೇಳಿದರು.ಈ ಹಿಂದೆ ಗೃಹ ಸಹ ಸಚಿವ ಜಿತೇಂದ್ರ ಸಿಂಗ್, “ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಪ್ರಯತ್ನಗಳು ನಡೆಯಬೇಕಿದೆ” ಎಂದು ಆಗ್ರಹಿಸಿದ್ದರು.












