ಟರ್ಕಿ ಹಾಗೂ ಕುರ್ದ್‌ಗಳು ಯುದ್ಧ ಪ್ರೇಮಿಗಳು- ಡೊನಾಲ್ಡ್ ಟ್ರಂಪ್

0
530

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಅ.20: ಟರ್ಕಿಯ ನಾಯಕರು ಮತ್ತು ಕುರ್ದ್ ಹೋರಾಟಗಾರರು ಯುದ್ಧವನ್ನು ಬಯಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಫೋನ್‍ನಲ್ಲಿ ಮಾತುಕತೆ ನಡೆಸಿದ ಬಳಿಕ ಈಶಾನ್ಯ ಸಿರಿಯದಲ್ಲಿ ಸೈನಿಕ ಕಾರ್ಯ ಆಚರಣೆಯನ್ನು ನಿಲ್ಲಿಸಲು ಟರ್ಕಿ ಬಯುಸುವುದಿಲ್ಲ ಎಂದು ಡೊನಾಲ್ಡ್ ಹೇಳಿದ್ದಾರೆ. ತಾತ್ಕಾಲಿಕ ಕದನ ವಿರಾಮಕ್ಕೆ ಅಮೆರಿಕದೊಂದಿಗೆ ಟರ್ಕಿ ಒಪ್ಪಂದ ಮಾಡಿಕೊಂಡಿತ್ತು.

ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಮತ್ತು ಅಮೆರಿಕ ಉಪಾಧ್ಯಕ್ಷ ಮೈಕ್‌ಪೆನ್ಸ್ ನಡುವೆ ಟರ್ಕಿ ರಾಜಧಾನಿ ಅಂಕಾರದಲ್ಲಿ ಉಭಯ ಕಕ್ಷಿ ಚರ್ಚೆ ನಡೆದಿದ್ದು ಟರ್ಕಿ ಸೈನಿಕ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿಕೊಂಡಿತ್ತು. ಒಂಪದ ಜಾರಿಗೆ ತಂದೆ ಟರ್ಕಿಯ ವಿರುದ್ಧ ಹೇರಿರುವ ಆರ್ಥಿಕ ದಿಗ್ಬಂಧನವನ್ನು ಹಿಂಪಡೆಯುವುದಾಗಿ ಪೆನ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದರ ಬೆನ್ನಿಗೆ ಡೊನಾಲ್ಡ್ ಟರ್ಕಿ ಮತ್ತು ಕುರ್ದ್‍ಗಳು ಯುದ್ಧ ಪ್ರೇಮಿಗಳೆಂಬ ಹೇಳಿಕೆ ನೀಡಿದ್ದಾರೆ.