ಇಸ್ತಾಂಬುಲ್ ಮೇಯರ್ ಚುನಾವಣೆ; ಉರ್ದುಗಾನ್ ಪಾರ್ಟಿಗೆ ಸೋಲು

0
846

ಅಂಕಾರ, ಜೂ. 24: ಟರ್ಕಿಯ ಇಸ್ತಾಂಬುಲ್ ಮೇಯರ್ ಚುನಾವಣೆಯಲ್ಲಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್‍ರ ಪಾರ್ಟಿ ಸೋಲನುಭವಿಸಿದೆ. ಶೇ. 90ರಷ್ಟು ವೋಟುಗಳನ್ನು ಎಣಿಸಿದಾಗ ಪ್ರತಿಪಕ್ಷ ಅಭ್ಯರ್ಥಿ ಇಕ್ರಂ ಇಮಾಮಲು ಶೇ. 54 ಮತಗಳನ್ನು ಗಳಿಸಿ ಗೆಲುವು ಖಚಿತಪಡಿಸಿಕೊಂಡಿದ್ದಾರೆ. ಪ್ರಾಥಮಿಕ ಮತ ಎಣಿಕೆಯಲ್ಲಿ ಗೆದ್ದಿರುವ ಇಕ್ರಂಗೆ ಉರ್ದುಗಾನ್ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. 25 ವರ್ಷಗಳ ಬಳಿಕ ದೇಶದಲ್ಲಿ ಅತಿದೊಡ್ಡ ನಗರ ಇಸ್ತಾಂಬುಲ್‍ನಲ್ಲಿ ಪ್ರತಿಪಕ್ಷ ಜಯಗಳಿಸಿದೆ.

ಮಾರ್ಚ್‍ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆಡಳಿತ ಪಕ್ಷ ಎಕೆ ಪಾರ್ಟಿ ಆರೋಪಿಸಿತ್ತು. ನಂತರ ಚುನಾವಣೆಯನ್ನು ರದ್ದುಪಡಿಸಲಾಗಿತ್ತು. ಅಂದು ಮಾಜಿ ಪ್ರಧಾನಿಯಾಗಿದ್ದ ಬಿನ್ ಅಲಿ ಯಿಲ್‍ ದ್ರಿಮ್‍ ರನ್ನು 13000 ಮತಗಳ ಅಂತರದಿಂದ ಇಕ್ರಂ ಇಮಾಮುಲು ಸೋಲಿಸಿದ್ದರು.