ಕೊರೋನಾ: ತನ್ನಲ್ಲಿ ಮೃತಪಟ್ಟ ಯಾವುದೇ ದೇಶದ ವ್ಯಕ್ತಿಯ ಕುಟುಂಬಕ್ಕೆ ನೆರವು- ಯು ಎ ಇ ಘೋಷಣೆ

0
878

ಸನ್ಮಾರ್ಗ ವಾರ್ತೆ

ದುಬೈ ಏಪ್ರಿಲ್ 19- ಕೊರೋನಾ ಆಘಾತದ ನಡುವೆ ಮಾನವೀಯ ಯೋಜನೆಯೊಂದಿಗೆ ಯುಎಇ ಮುಂದೆ ಬಂದಿದೆ.

ಕೊರೋನಾದ ಕಾರಣದಿಂದ ಯುಎಇಯಲ್ಲಿ ಮೃತಪಟ್ಟ ಯಾವುದೇ ದೇಶದ ವ್ಯಕ್ತಿಯ ಕುಟುಂಬಕ್ಕೆ ಮೂಲಭೂತ ಖರ್ಚು ಗಳನ್ನು ನಿಭಾಯಿಸಲು ಸಾಕಾಗುವಷ್ಟು ನೆರವನ್ನು ನೀಡಲಾಗುವುದು ಎಂದು ಯುಎಇ ತಿಳಿಸಿದೆ. ಇದರ ಹೊಣೆಯನ್ನು ಎಮಿರೇಟ್ಸ್ ರೆಡ್ ಕ್ರೆಸೆಂಟ್ ವಹಿಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಸರಕಾರದ ಸಂಪರ್ಕ ಕಛೇರಿ ಮಾಧ್ಯಮಗಳಿಗೆ ಈ ವಿವರವನ್ನು ಬಿಡುಗಡೆಗೊಳಿಸಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.