ಕೊರೊನ ಪಾಸಿಟಿವ್ ನೊಂದಿಗೆ 350 ಕಿ. ಮೀ ನಡೆದ ಯುವಕ: ಲಾಕ್ ಡೌನ್ ಸಂಕಟ

0
535

ಸನ್ಮಾರ್ಗ ವಾರ್ತೆ

ಮುಂಬೈ, ಎ. 18: ಪುಣೆಯಿಂದ ಪಾರ್ಬನಿಗೆ 350 ಕಿಲೋಮೀಟರ್ ದೂರವಿದ್ದು ಕೊರೊನಾ ಪೀಡಿತ 21 ವರ್ಷದ ಯುವಕ ನಡೆದು ಬಂದಿದ್ದಾನೆ. ಪಾರ್ಬನಿ ಅವನ ಹುಟ್ಟೂರು. ಪುಣೆಯಲ್ಲಿ ಆತ ಕೆಲಸ ಮಾಡುತ್ತಾನೆ. ಲಾಕ್ ಡೌನ್‍ನಲ್ಲಿ ಸಿಲುಕಿದ ಯುವಕ ನಡೆದೇ ಊರಿಗೆ ಬಂದಿದ್ದಾನೆ.

ಯುವಕನಲ್ಲಿ ರೋಗ ಲಕ್ಷಣಗಳು ಗೋಚರಿಸಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಯುವಕನಿಗೆ ಕೊರೊನೊ ಇರುವುದು ದೃಢಪಟ್ಟಿದೆ. ಜೊತೆಗೆ ಯುವಕನೊಂದಿಗೆ ನಿಕಟ ಸಂಪರ್ಕ ಹೊಂದಿದವರನ್ನು ನಿರೀಕ್ಷಣೆಯಲ್ಲಿರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಈವರೆಗೆ ಪಾರ್ಬನಿ ಕೊರೊನಾ ಮುಕ್ತ ಜಿಲ್ಲೆಯಾಗಿತ್ತು. ಮಹಾರಾಷ್ಟ್ರದ 36 ಜಿಲ್ಲೆಗಳಲ್ಲಿ ಈಗ ಹದಿನೇಳು ಜಿಲ್ಲೆಗಳಿಗೆ ಕೊರೊನಾ ಹರಡಿದಂತಾಗಿದೆ. ಇದರಲ್ಲಿ ಪಾರ್ಬನಿಯೂ ಸೇರಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.