ಸನ್ಮಾರ್ಗ ವಾರ್ತೆ
ಮುಂಬೈ, ಫೆ. 8: ಪ್ರಯಾಣಿಸುತ್ತಿದ್ದಾಗ ಗೆಳೆಯನೊಂದಿಗೆ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆಗಳ ಕುರಿತು ಮಾತಾಡಿದ ಯುವ ಕವಿಯನ್ನು ಉಬರ್ ಚಾಲಕ ಪೊಲೀಸರಿಗೆ ಒಪ್ಪಿಸಿದ್ದಾನೆ. ಕಾಲಘಾಡ ಕಲಾ ಮಹೋತ್ಸವದಲ್ಲಿ ಭಾಗವಹಿಸಲು ಜೈಪುರದಿಂದ ಬಂದ ಬಾಪಾದಿತ್ಯ ಸರ್ಕಾರ್ ಎಂಬವರನ್ನು ಉಬರ್ ಚಾಲಕ ರೋಹಿತ್ ಸಿಂಗ್ ಪೊಲೀಸ್ ಠಾಣೆಗೆ ಕರೆ ತಂದಿದ್ದಾನೆ. ಬುಧವಾರ ರಾತ್ರೆ ಘಟನೆ ನಡೆದಿದೆ. ದೇಶವ್ಯಾಪಕ ಶಾಹಿನ್ಬಾಗ್ ಆಗಲಿದೆ, ಬೆಂಕಿ ಹಚ್ಚುವೆ ಎಂದು ಬಾಪ್ಪಾದಿತ್ಯ ಪೋನ್ನಲ್ಲಿ ಮಾತಾಡಿದ್ದನ್ನು ಕೇಳಿದೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದೇನೆ. ಮಾತುಕತೆಯನ್ನು ಮುದ್ರಿಸಿಕೊಂಡಿದ್ದ ಚಾಲಕ ಅದನ್ನು ಪೊಲೀಸರಿಗೆ ಕೊಟ್ಟಿದ್ದಾನೆ. ಜುಹುನಿಂದ ಕುರ್ಲಾಕ್ಕೆ ಪ್ರಯಾಣದ ವೇಳೆ ಎಟಿಎಂನಿಂದ ಹಣ ತೆಗೆಯಲು ಎಂದು ಸುಳ್ಳು ಹೇಳಿ ಚಾಲಕ ಸಾಂತಾಕ್ರೂಸಸ್ ಪೊಲೀಸ್ ಠಾಣೆಗೆ ಬಾಪಾದಿತ್ಯರನ್ನು ಕರೆದುಕೊಂಡು ಹೋಗಿದ್ದಾನೆ. ಎರಡು ಗಂಟೆಯ ವರೆಗೆ ಪೊಲೀಸರು ತನ್ನನ್ನು ಪ್ರಶ್ನಿಸಿದರು ಎಂದು ಬಾಪಾದಿತ್ಯ ಹೇಳಿದರು. ಅಪರಾಧವಾಗುವುದನ್ನು ತಾನು ಹೇಳಿಲ್ಲ ಎಂದು ಪೊಲೀಸರಿಗೆ ಮನವರಿಕೆ ಮಾಡಿದ ಬಳಿಕ ಅವರನ್ನು ಪೊಲೀಸುರು ಬಿಟ್ಟು ಕಳಿಸಿದ್ದಾರೆ. ಘಟನೆಯ ತನಿಖೆ ನಡೆಸುವುದಾಗಿ ಉಬರ್ ತಿಳಿಸಿದೆ.
ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಜೈಪುರ, ಶಾಹೀನ್ಬಾಗ್, ಮುಂಬೈಬಾಗ್ನ ಹೋರಾಟದಲ್ಲಿ ತಾನು ಭಾಗವಹಿಸಿರುವೆ ಎಂದು ಬಾಪಾದಿತ್ಯ ಹೇಳಿದರು. ಯಾಕೆ ತನ್ನನ್ನು ಪೊಲೀಸ್ ಠಾಣೆಗೆ ಕರೆತಂದದ್ದೆಂದು ಕೇಳಿದಾಗ ಅದು ನಿಮ್ಮ ಭಾಗ್ಯ ನಿಮ್ಮನ್ನು ಬೇರೆಲ್ಲಿಗಾದರೂ ಕೊಂಡು ಹೋಗಲೂ ತನ್ನಿಂದ ಸಾಧ್ಯ ಎಂದು ಚಾಲಕ ಬೆದರಿಸಿದ್ದ ಎಂದು ಬಾಪಾದಿತ್ಯ ಸರಕಾರ್ ತಿಳಿಸಿದರು.












