‘ಸೂರ್ಯ ನಮಸ್ಕಾರ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ ಯುಜಿಸಿ…!

0
209

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಯುಜಿಸಿ(ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್) ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದು, ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಲು ಸೂಚಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಆದೇಶವನ್ನು ಕಳುಹಿಸಿದ್ದು, 75ನೇ ಸ್ವಾತಂತ್ರ್ಯ ದಿನದ ಭಾಗವಾಗಿ ಜನವರಿಯಿಂದ ಫೆಬ್ರುವರಿ ಏಳರವರೆಗೆ 30 ದಿನಗಳಲ್ಲಿ 30,000 ಸಂಸ್ಥೆಗಳ ಮೂರು ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿ 75 ಕೋಟಿ ಸೂರ್ಯ ನಮಸ್ಕಾರ ಮಾಡಿಸುವುದು ನ್ಯಾಶನಲ್ ಸ್ಪೋರ್ಟ್ಸ್ ಡೇ ಕಾರ್ಯಕ್ರಮವಾಗಿದೆ ಎಂದು ತಿಳಿದು ಬಂದಿದೆ.

ಗಣರಾಜ್ಯೋತ್ಸವ ದಿನದಲ್ಲಿ ರಾಷ್ಟ್ರೀಯ ಧ್ವಜ ಮುಂದೆ ಸಂಗೀತ ಸೂರ್ಯ ನಮಸ್ಕಾರ ನಡೆಸಲಾಗುವುದು ಎಂದು ಯುಜಿಸಿ ತೀರ್ಮಾನಿಸಿದೆ. ಇದರ ಭಾಗವಾಗಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು, ಅಫಿಲಿಯೇಟೆಡ್ ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ಕೊಡಲು ಯುಜಿಸಿ ಆಗ್ರಹಿಸಿದೆ.