ಮಕ್ಕಾದ ಹರಮ್‌ನಲ್ಲಿ ಬಿಸಿಲ ಧಗೆಯಿಂದ ಬಳಲಿದ ತೀರ್ಥಯಾತ್ರಿಕನಿಗೆ ಕೊಡೆ ನೀಡಿದ ಸೆಕ್ಯೂರಿಟಿ ಗಾರ್ಡ್‌ಗೆ ರಾಜ್ಯಪಾಲರಿಂದ ಸನ್ಮಾನ

0
1439

ಸನ್ಮಾರ್ಗ ವಾರ್ತೆ

ಮಕ್ಕಾದ ಹರಮ್‌ನಲ್ಲಿ ತವಾಫ್‌ನ(ಕಾಬಾ ಭವನಕ್ಕೆ ಏಳು ಸುತ್ತು ಪ್ರದಕ್ಷಿಣೆ ಹಾಕುವ ಪ್ರಕ್ರಿಯೆ) ವೇಳೆ ತೀವ್ರ ಬಿಸಿಲಿನ ಕಾರಣದಿಂದ ಅಸ್ವಸ್ಥಗೊಂಡ ಉಮ್ರಾ ಯಾತ್ರಿಕನಿಗೆ ತನ್ನ ಕೊಡೆಯನ್ನು ನೀಡಿ ನೆರಳು ಒದಗಿಸಿದ ಹರಮ್‌ನ ಸುರಕ್ಷತಾ ಉದ್ಯೋಗಿಗೆ ಮಕ್ಕ ರಾಜ್ಯಪಾಲರು ಸನ್ಮಾನಿಸಿದ್ದಾರೆ.

ಮಕ್ಕದ ಗವರ್ನರ್ ಅಮೀರ್ ಖಾಲಿದ್ ಅಲ್ ಫೈಸಲ್ ಅವರು ಈ ಸುರಕ್ಷಾ ಪಡೆಯ ಫಾಯಿಸ್ ಅಲ್ ಗಾಮಿದಿ ಎಂಬ ಉದ್ಯೋಗಿಯನ್ನು ಸನ್ಮಾನಿಸಿದ್ದಾರೆ

ತವಾಫ್‌ನ ನಡುವೆ ಬಿಸಿಲಿನ ಝಳವನ್ನು ತಾಳಲಾಗದೆ ಕಾಬಾದ ಬಳಿ ನಿಯೋಜಿತ ಉದ್ಯೋಗಿ ಫಾಯಿಸ್ ಅಲ್ ಗಾಮಿದಿಯ ಬಳಿ ಬಂದ ಆ ಯಾತ್ರಿಕ ಅವರ ಕೈಯಲ್ಲಿದ್ದ ಕೊಡೆಯನ್ನು ನೀಡುವಂತೆ ವಿನಂತಿಸಿದರು. ಆಗ ಗಾಮಿದಿ ತನ್ನ ಕೊಡೆಯನ್ನು ಅವರಿಗೆ ತಕ್ಷಣ ನೀಡಿದರು.

ಇಸ್ಲಾಂ ಮುಂದಿಡುವ ಮಾನವೀಯತೆಯನ್ನು ಗಾಮಿದಿಯ ಈ ಗುಣ ಪ್ರತಿಫಲಿಸುತ್ತದೆ ಎಂದು ರಾಜ್ಯಪಾಲರು ಕೊಂಡಾಡಿದ್ದಾರೆ.