ಸಮಾನ ಸಿವಿಲ್ ಕೋಡ್: ಸಿಪಿಎಂ ನ ಡರ್ಟಿಪಾಲಿಟಿಕ್ಸ್, ಇದು ಮುಸ್ಲಿಮರ ಸಮಸ್ಯೆ ಆಗಬೇಕೆಂದು ಸಿಪಿಎಂ, ಮೋದಿ ಬಯಸುತ್ತಾರೆ – ಇಟಿ ಮುಹಮ್ಮದ್ ಬಶೀರ್

0
92

ಸನ್ಮಾರ್ಗ ವಾರ್ತೆ

ಮಲಪ್ಪುರಂ, ಜು.8: ಸಿಪಿಎಂನ ಸಮಾನ ಸಿವಿಲ್ ಕೋಡ್ ಸೆಮಿನಾರಿನಲ್ಲಿ ಲೀಗ್‍ಗೆ ಆಹ್ವಾನ ನೀಡಿದ್ದು ಕಪಟತನ ಎಂದು ಮುಸ್ಲಿಂ ಲೀಗ್ ನಾಯಕ ಇಟಿ ಮುಹಮ್ಮದ್ ಬಶೀರ್ ಹೇಳಿದರು.

ಸಿಪಿಎಂ ಎಂದೂ ಯಾವ ಕಾಲಘಟ್ಟದಲ್ಲಿಯೂ ಪ್ರಾಮಾಣಿಕ ನಿಲುವು ಕೈಗೊಂಡಿಲ್ಲ. ಎಲ್ಲ ವಿಷಯದಲ್ಲಿಯೂ ಅದು ಕೇವಲ ನಟನೆ ಮಾಡುತ್ತದೆ. ಎಲ್ಲ ವಿಷಯಗಳಲ್ಲಿ ದುರುದ್ದೇಶವಿರುವ ಪಕ್ಷವಾಗಿದೆ ಸಿಪಿಎಂ. ಧಾರ್ಮಿಕ ಮತ್ತು  ರಾಜಕೀಯ ಸಂಘಟನೆಗಳು ಪರಸರ ಬಡಿದಾಡಿಸಿ ಲಾಭಕೊಯ್ಯುವ ಡರ್ಟಿ ಪಾಲಿಟಿಕ್ಸ್ ಅದು ಆಡುತ್ತದೆ. ಎಲ್ಲ ರಾಜಕೀಯ ನಡೆಗಳಲ್ಲಿ ಅವರಲ್ಲಿ ದ್ವಂದ್ವ ನೀತಿ ಇದೆ. ಜನರ, ಸಮಾಜದ ಬಗ್ಗೆ ಅದಕ್ಕೆ ಯಾವುದೇ ಕಾಳಜಿಯಿಲ್ಲ, ಕೇವಲ ಪಕ್ಷದ ಲಾಭ ಮಾತ್ರ ಅವರ ಗುರಿಯಾಗಿದೆ ಎಂದು ಇಟಿ ಬಶೀರ್ ಹೇಳಿದರು.

ಸಮಾನ ಸಿವಿಲ್ ಕೋಡ್ ಮುಸ್ಲಿಮರನ್ನು ಮಾತ್ರ ಬಾಧಿಸುವ ಸಮಸ್ಯೆಯಂತೆ ಸಿಪಿಎಂ ಚಿತ್ರಿಸುತ್ತದೆ. ಬಿಜೆಪಿಗೂ ಬೇಕಾಗಿರುವುದು ಇದುವೇ. ಇದನ್ನು ಮುಸ್ಲಿಮರ ತಲೆಗೆ ಕಟ್ಟಲು ಮೋದಿ ಬಯಸುತ್ತಾರೆ. ಅವರಂತೆ ಇಲ್ಲಿನ ಕೆಲವು ಸಿಪಿಎಂನವರಲ್ಲೂ ಅದೇ ಬಯಕೆಯಿದೆ ಎಂದು ಕೇರಳದ ಕಮ್ಯುನಿಸ್ಟರ ಕುರಿತು ಅವರು ಹೇಳಿದರು.

ಸಮಾನ ಸಿವಿಲ್ ಕೋಡ್ ಇಡೀ ಭಾರತವನ್ನು ಬಾಧಿಸುವ ಸಮಸ್ಯೆಯಾಗಿದೆ ಎಂದು ಮುಸ್ಲಿಮ್ ಲೀಗ್ ಮನಗಂಡಿದೆ. ಇದು ಕೇವಲ ಮುಸ್ಲಿಮರನ್ನು ಬಾಧಿಸುವ ಸಮಸ್ಯೆಯಲ್ಲ ಎಂಬುದನ್ನು ಲೀಗ್ ಏರ್ಪಡಿಸಿದ ಕೋಝಿಕ್ಕೋಡಿನ ಸಭೆಯಲ್ಲಿಯೂ ಸ್ಪಷ್ಟವಾಗಿ ಹೇಳಲಾಗಿತ್ತು. ಸಮಾನ ಸಿವಿಲ್ ಕೋಡನ್ನು ಅಷ್ಟು ಸುಲಭದಲ್ಲಿ ಜಾರಿಗೆಗೊಳಿಸಲು ಸಾಧ್ಯವಿಲ್ಲವೆಂದು ಮೋದಿಗೂ ತಿಳಿದಿದೆ. ಅವರ ಸ್ವ ಪಕ್ಷದವರಿಗೂ ಇದು ಸಮಸ್ಯೆ ಸೃಷ್ಟಿಸಬಹುದು. ಆದ್ದರಿಂದಲೇ ಇದುವರೆಗೂ ಸಮಾನ ಸಿವಿಲ್ ಕುರಿತು ಸರಿಯಾದ ವಿವರ ಹೊರಬಂದಿಲ್ಲ.

ಮೋದಿಯವರದ್ದು ರಾಜಕೀಯ ಲಾಭಗಳಿಸುವ ಎಜೆಂಡವಾಗಿದೆ. ಸಿಪಿಎಂ ಟ್ರಾಪ್‍ನಲ್ಲಿ ಬೀಳುವ ಪಾರ್ಟಿ ಲೀಗಲ್ಲ ಎಂದು ಮುಹಮ್ಮದ್ ಬಶೀರ್ ಸ್ಪಷ್ಟಪಡಿಸಿದರು. ಸಿಎಎ ವಿಷಯದಲ್ಲಿ ಹೋರಾಟ ಮಾಡಿದವರ ವಿರುದ್ಧ ಕೇಸು ಹಿಂಪಡೆಯುತ್ತೇವೆಂದ ಸಿಪಿಎಂ ಈ ವರೆಗೆ ಕೇಸನ್ನು ಹಿಂಪಡೆದುಕೊಂಡಿಲ್ಲ. ಹಾಗೆಯೇ ಎಷ್ಟೆಷ್ಟು ವಿಷಯಗಳಲ್ಲಿ ಸಿಪಿಎಂ ಅಲ್ಪಸಂಖ್ಯಾತರ ವಿರುದ್ಧ ನಿಲುವು ಕೈಗೊಂಡಿಲ್ಲ ಎಂದು ಇಟಿ ಮುಹಮ್ಮದ್ ಬಶೀರ್ ಪ್ರಶ್ನಿಸಿದ್ದಾರೆ.