ಚೀನದಲ್ಲಿ ಅಜ್ಞಾತ ನ್ಯೂಮೇನಿಯ ದಾಳಿ: ಆಸ್ಪತ್ರೆಯಲ್ಲಿ ತುಂಬಿಕೊಂಡ ಮಕ್ಕಳು

0
418

ಸನ್ಮಾರ್ಗ ವಾರ್ತೆ

ಬೀಜಿಂಗ್: ಮತ್ತೊಂದು ಮಹಾರೋಗದ ಎಚ್ಚರಿಕೆಯನ್ನು ಚೀನಾ ನೀಡಿದೆ. ನಿಗೂಢವಾದ ಒಂದು ನ್ಯೂಮೇನಿಯ ಹರಡುವುದು ಇದು. ಮಕ್ಕಳ ಉಸಿರಾಟಕ್ಕೆ ಸಂಬಂಧಿಸಿದ ರೋಗವಾಗಿ ಇದು ವ್ಯಾಪಿಸುತ್ತಿದೆ.

ಕೊರೊನದ ನಂತರ ಚೀನದ ಆಸ್ಪತ್ರೆಯಲ್ಲಿ ಜನ ತುಂಬಿ ತುಳುಕುವಂತೆ ಇದು ಮಾಡಿದೆ ಎಂಬ ವರದಿಗಳಿವೆ. ನ್ಯೂಮೇನಿಯ ಹರಡುವ ಕ್ಲಸ್ಟರ್ ಗಳ  ಕುರಿತು ಸಂಗ್ರಹಿಸುವ ಕೆಲಸ ಮಾಡಿ ಎಂದು ವಿಶ್ವ ಆರೋಗ್ಯ ಸಂಘಟನೆ ಡಬ್ಲ್ಯು ಎಚ್‍ ಒ ಚೀನಕ್ಕೆ ಸೂಚಿಸಿದೆಯೆಂದು ವರದಿಯಾಗಿದೆ.

ಉತ್ತರ ಚೀನದಲ್ಲಿ ಮೊದಲ ಬಾರಿಗೆ ಈ ರೋಗ ಕಂಡು ಬಂದಿದೆ. ಮಕ್ಕಳಲ್ಲಿ ಇದು ಹೆಚ್ಚಾಗಿ ಹರಡುತ್ತಿದೆ. ಜ್ವರ, ಕೆಮ್ಮು ಉಸಿರು ಕಟ್ಟುವುದು ಈ ರೋಗದ ಪ್ರಾಥಮಿಕ ಲಕ್ಷಣಗಳಾಗಿವೆ. ಈ ರೋಗದಲ್ಲಿ ನ್ಯೂಮೇನಿಯದ ಲಕ್ಷಣವನ್ನು ಹೊಂದಿದ್ದರು ಅದರ ತೀವ್ರತೆ ನ್ಯೂಮೇನಿಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಇದು ಮಕ್ಕಳಲ್ಲಿ ಬೇಗನೆ ಹರಡುತ್ತಿರುವುದು ತುಂಬ ಆತಂಕಕ್ಕೆ ಕಾರಣವಾಗಿದೆ ಎಂದು ಜಗತ್ತಿನಾದ್ಯಂತ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಂಡು ಬರುವ ರೋಗವನ್ನು ನಿರೀಕ್ಷಿಸುವ ಫ್ಲಾಟ್‍ಫಾಮಾ ಪ್ರೊಮೆಡ್ ಬಹಿರಂಗ ಪಡಿಸಿದೆ. ಮುಂಜಾಗ್ರತೆಗಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.

ಇದೇ ವೇಳೆ ಚೀನದಲ್ಲಿ ಉದ್ಭವಿಸಿದ ಕೊರನದ ಆಘಾತ ಎಲ್ಲವನ್ನು ಪರಿಗಣಿಸಿ ಈ ಹೊಸ ನ್ಯೂಮೇನಿಯದ ಕುರಿತು ವಿಶ್ವಾರೋಗ್ಯ ಸಂಘಟನೆ ಗಂಭೀರವಾಗಿ ಪರಿಗಣಿಸಿದೆ ಎಂದು ವರದಿ ತಿಳಿಸಿತು.