ಜಾಮೀನು ಪಡೆದ ಫಹಾದ್ ಶಾ ಮನೆಗೆ

0
346

ಸನ್ಮಾರ್ಗ ವಾರ್ತೆ

ಶ್ರೀನಗರ: ಭಯೋತ್ಪಾದನೆಯನ್ನು ಹರಡಿದ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಮನೆಗೆ ಮರಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಕಳೆದ ವಾರ ಶಾ ಅವರಿಗೆ ಜಾಮೀನು ನೀಡಿದೆ. 17 ನವೆಂಬರ್ 2023 ರಂದು, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಯುಎಪಿಎಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಾ ವಿರುದ್ಧದ ಆರೋಪಗಳನ್ನು ವಜಾಗೊಳಿಸಿತು.

ಎರಡೂವರೆ ವರ್ಷ ಜೈಲಿನಲ್ಲಿದ್ದರು ಫಹಾದ್. ಪುಲ್ವಾಮಾ ಎನ್‌ಕೌಂಟರ್ ಕುರಿತು ಸುದ್ದಿ ನಿಯತಕಾಲಿಕ ದಿ ಕಾಶ್ಮೀರ್ ವಾಲಾದಲ್ಲಿ ಸುದ್ದಿ ಪ್ರಕಟಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಯೋತ್ಪಾದನೆಯ ಆರೋಪದ ಮೇಲೆ ಶಾ ಅವರನ್ನು ಬಂಧಿಸಿದ್ದರು. ಐಟಿ ಆ್ಯಕ್ಟ್ ಪ್ರಕಾರ ಈ ವರ್ಷದ ಆರಂಭದಲ್ಲಿ ದಿ ಕಾಶ್ಮೀರ್ ವಾಲಾ ನಿಯತಕಾಲಿಕವನ್ನು ನಿಷೇಧಿಸಲಾಗಿತ್ತು.

ಫಹಾದ್ ಶಾ ಜೈಲಿನಿಂದ ಬಿಡುಗಡೆಗೊಂಡಿರುವುದನ್ನು ಸ್ವಾಗತಿಸಿರುವ ಪತ್ರಕರ್ತರ ರಕ್ಷಣಾ ಸಮಿತಿಯು ಕಾಶ್ಮೀರಿ ವಾಲಾ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.