ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಆ. 23: ಅಲ್ ಕಾಯಿದ ನಾಯಕ ಉಸಾಮಾ ಬಿನ್ ಲಾದೆನ್ ಪುತ್ರ ಹಂಝ ಬಿನ್ ಲಾದೆನ್ ಕೊಲೆಯಾಗಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್‍ಪರ್ ದೃಢೀಕರಿಸಿದ್ದಾರೆ. ಬುಧವಾರ ಫಾಕ್ಸ್ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಹಂಝ ಕೊಲೆಯಾಗಿದ್ದಾನೆಯೇ ಎನ್ನುವ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದು ಘಟನೆಯ ವಿವರ ತನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಅಮೆರಿಕ ರಕ್ಷಣಾ ಆಧಿಕಾರಿ, ಹಂಝ ಸಾವನ್ನು ಮಾಧ್ಯಮಗಳಿಗೆ ತಿಳಿಸಿದ್ದರು. ಹಂಝ ಎಲ್ಲಿ ಕೊಲೆಯಾದನೆಂಬುದಾಗಲಿ, ಅದರಲ್ಲಿ ಅಮೆರಿಕದ ಪಾತ್ರ ಇದೆಯೇ ಎಂಬುದಾಗಲಿ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಉಸಾಮಾ ಬಿನ್ ಲಾದೆನ್‍ನ 20 ಮಕ್ಕಳಲ್ಲಿ ಹಂಝ ಹದಿನೈದನೆಯ ಪುತ್ರ ಆಗಿದ್ದು ಆತನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಹಂಝನ ಬಂಧನಕ್ಕೆ ನೆರವಾದವರಿಗೆ ಹತ್ತು ಲಕ್ಷ ಪಾರಿತೋಷಕ ಘೋಷಿಸಲಾಗಿತ್ತು. ಅಮರಿಕ ಉಸಾಮಾ ಬಿನ್ ಲಾದೆನ್‍ನ್ನು ಪಾಕಿಸ್ತಾನದ ಅಬೋಟಾಬಾದಿನಲ್ಲಿ ಹತ್ಯೆ ಮಾಡಿದ ವೇಳೆ ಹಂಝ ಸೆರೆ ಸಿಕ್ಕಿರಲಿಲ್ಲ.












