ಸನ್ಮಾರ್ಗ ವಾರ್ತೆ
ಲಂಡನ್,ಜೂ.15: ವಂಶೀಯ ದರೋಡೆಕೋರರಿಗೆ ಬ್ರಿಟನ್ನ ಬೀದಿಗಳಲ್ಲಿ ಸ್ಥಳ ಇಲ್ಲ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ್ದಾರೆ. ಪೊಲೀಸ್ರ ಮೇಲೆ ದಾಳಿ ಮಾಡುವವರನ್ನು ಬಲವಾಗಿ ಎದುರಿಸಲಾಗುವುದು. ಜನಾಂಗೀಯತೆಗೆ ಬ್ರಿಟನ್ನಲ್ಲಿ ಜಾಗ ಇಲ್ಲ. ಇದರ ವಿರುದ್ದ ಒಗ್ಗೂಡಿ ಹೋರಾಟ ನಡೆಸುತ್ತೇವೆ ಎಂದು ಅವರು ಹೇಳಿದರು.
ಮಧ್ಯ ಲಂಡನ್ನಲ್ಲಿ ಹಿಂಸಾಚಾರಕ್ಕೆ ಇಳಿದ ಬಲಪಂಥೀಯ ಪ್ರತಿಭಟನಾಕಾರರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾನ್ಸನ್ ಹೇಳಿಕೆ ನೀಡಿದ್ದಾರೆ. ಜನಾಂಗೀಯತೆಯನ್ನು ಬೆಂಬಲಿಸಿದ್ದ ಪ್ರಮುಖರ ಪ್ರತಿಮೆಗಳ ವಿರುದ್ಧ ಬ್ರಿಟನ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದನ್ನು ವಿರೋಧಿಸಿ ನಮ್ಮ ಸ್ಮಾರಕ್ಕಗಳನ್ನು ಸಂರಕ್ಷಿಸೋಣ ಎಂಬ ಘೋಷಣೆಯೊಂದಿಗೆ ಪಾರ್ಲಿಮೆಂಟ್ ಸ್ಕ್ವಾರ್ನಲ್ಲಿ ಆಯೋಜಿಸಲಾದ ತೀವ್ರ ಬಲಪಂಥೀಯರು ಪೊಲೀಸರ ಮೇಲೆ ಹಲ್ಲೆಗಿಳಿದಿದ್ದರು.
ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲಿ ಮುಂತಾದುವುಗಳನ್ನು ಎಸೆದಿದ್ದಾರೆ ಎಂದು ಮೆಟ್ರೊಪಾಲಿಟಿನ್ ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಅಂತರ ಪಾಲಿಸದೆ ಸಾವಿರಾರು ಮಂದಿ ಅಲ್ಲಿ ಸೇರಿದ್ದರು. ಆರು ಪೊಲೀಸಧಿಕಾರಿಗಳು ಗಾಯಗೊಂಡಿರುವುದಾಗಿ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












