ಉತ್ತರ ಪ್ರದೇಶ: ರಿಕ್ಷಾ ಎಳೆಯುವವನಿಗೆ 3 ಕೋಟಿ ರೂಪಾಯಿ ನೋಟಿಸು ನೀಡಿದ ಐಟಿ ಇಲಾಖೆ

0
614

ಸನ್ಮಾರ್ಗ ವಾರ್ತೆ

ಮಥುರಾ: ಉತ್ತರಪ್ರದೇಶದಲ್ಲಿ ರಿಕ್ಷಾ ಎಳೆಯುವವನಿಗೆ ಆದಾಯ ತೆರಿಗೆ ಇಲಾಖೆಯು ಮೂರು ಕೋಟಿ ರೂಪಾಯಿಯ ನೋಟಿಸು ನೀಡಿದ ಘಟನೆಯು ವರದಿಯಾಗಿದೆ. ರವಿವಾರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಹೆಸರಿನಲ್ಲಿ ಯಾರೋ ವಂಚನೆ ನಡೆಸುತ್ತಿದ್ದಾರೆ ಎಂದು ರಿಕ್ಷಾ ಎಳೆಯುವ ವ್ಯಕ್ತಿ ಹೇಳಿದ್ದಾರೆ. ಮೂರು ಕೋಟಿ ರೂಪಾಯಿ ತೆರಿಗೆ ಬಾಕಿ ಇದೆ ಎಂಬುದಾಗಿ
ಮಥುರಾದ ಬಗಲ್ಪುರ ಅಮರ್ ಕಾಲನಿಯ ಪ್ರತಾಪ್ ಸಿಂಗ್‍ಗೆ ಆದಾಯ ಇಲಾಖೆ ನೋಟಿಸು ಜಾರಿ ಮಾಡಿದೆ.

ತಾನು ಅನಕ್ಷರಸ್ಥ. ತನಗೆ ಪಾನ್ ಕಾರ್ಡಿನ ಒರಿಜನಲ್, ಕಲರ್ ಫೋಟೊ ಕಾಪಿಯೊ ಎಂಬುದನ್ನು ಗುರುತಿಸಲು ಕೂಡಾ ಆಗುವುದಿಲ್ಲ ಎಂದು ಸಿಂಗ್ ಹೇಳಿದರು. ಪಾನ್‍ ಕಾರ್ಡಿಗೆ ಅರ್ಜಿ ಹಾಕಿದ ಮೂರು ತಿಂಗಳ ಆದ ಮೇಲೆ ಸಿಂಗ್‍ರಿಗೆ ಪಾನ್ ಕಾರ್ಡ್ ಸಿಕ್ಕಿದೆ. ಅದರ ನಂತರ ಅಕ್ಟೋಬರ್ 19ಕ್ಕೆ ಐಟಿ ಅಧಿಕಾರಿಗಳಿಂದ 3,47,54,9886 ರೂಪಾಯಿಯ ನೋಟಿಸು ಬಂದಿದೆ.

ಯಾರೊ ಒಬ್ಬ ತನ್ನ ಹೆಸರಲ್ಲಿ ಬೇನಾಮಿ ಬಿಸಿನೆಸ್ ಮಾಡುತ್ತಿದ್ದಾನೆ ಎಂದು ಜಿಎಸ್‍ಟಿ ನಂಬರ್ ಪಡೆದುಕೊಂಡಿದ್ದಾನೆ ಎಂದು, 2018-19ರ ವ್ಯವಹಾರ 43,44,36,201 ರೂಪಾಯಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ಸಿಂಗ್ ಹೇಳಿದರು.