ನೂತನ ಕಾನೂನಿನೊಂದಿಗೆ ಭೂ ಗಡಿಗಳನ್ನು ಭದ್ರಪಡಿಸಿದ ಚೀನಾ

0
474

ಸನ್ಮಾರ್ಗ ವಾರ್ತೆ

ಬೀಜಿಂಗ್: ಭಾರತದೊಂದಿಗೆ ಗಡಿ ವಿವಾದ ತೀವ್ರವಾಗಿರುವ ವೇಳೆಯೇ ಪ್ರಾದೇಶಿಕ ಸುರಕ್ಷೆ, ಸಾರ್ವಭೌಮತ್ವ ಎತ್ತಿ ಹಿಡಿಯುವ ನೆಪ ಮುಂದಿಟ್ಟು ಹೊಸ ಭೂ ಗಡಿ ಕಾನೂನನ್ನು ಚೀನ ಜಾರಿಗೆ ತಂದಿದೆ.

ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ ಸ್ಟ್ಯಾಂಡಿಂಗ್ ಕಮಿಟಿ ಸದಸ್ಯರು ಈ ಕಾನೂನನ್ನು ಬೆಂಬಲಿಸಿದ್ದಾರೆ. ಗಡಿಯ ಸುರಕ್ಷೆ ಹೆಚ್ಚಿಸುವ ವ್ಯವಸ್ಥೆಯು ಕೂಡ ಈ ಕಾನೂನಿನಲ್ಲಿದೆ. ಗಡಿ ಕ್ಷೇತ್ರದಲ್ಲಿ ವಾಸವಿರುವವರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯಗೊಳಿಸಲು ಕ್ರಮ ಜರಗಿಸುವುದಾಗಿ ಮತ್ತು ಈ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವುದಕ್ಕೆ ಕಾನೂನು ಶಿಫಾರಸು ಮಾಡುತ್ತದೆ.

2022 ಜನವರಿ ಒಂದರಿಂದ ಈ ಕಾನೂನು ಜಾರಿಗೆ ಬರುತ್ತದೆ. ಈಗ ಬಾರತ ಭೂತಾನ್‌ನೊಂದಿಗೆ ಚೀನದ ಗಡಿ ವಿವಾದ ಇದೆ. 12 ದೇಶಗಳೊಂದಿಗಿದ್ದ ಗಡಿ ವಿವಾದ ಪರಿಹರಿಸಿಕೊಳ್ಳಲಾಗಿದೆ ಎಂದು ಚೀನ ಹೇಳಿಕೊಂಡಿದೆ.