ಉತ್ತರ ಪ್ರದೇಶ| ದಲಿತ ಸಹೋದರಿಯರನ್ನು ಕೊಲೆ ಮಾಡಿ ಕೊಳದಲ್ಲಿ ಹೂತು ಹಾಕಿದರು

0
274

ಸನ್ಮಾರ್ಗ ವಾರ್ತೆ

ಲಕ್ನೊ,ನ.17: ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯರನ್ನು ಕೊಲೆ ಮಾಡಿ ಕೊಳದಲ್ಲಿ ಹೂತು ಹಾಕಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಸೋದರ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಮಾಡಿದೆ.

ಕೊಲೆಯಾದ ಇಬ್ಬರು ಬಾಲಕಿಯರು ಸಹೋದರಿಯರಾಗಿದ್ದಾರೆ. ಕಣ್ಣಿಗೆ ಗಾಯವಾದ ಸ್ಥಿತಿಯಲ್ಲಿ ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿದೆ. 12 ವರ್ಷದ ಸುಮಾ 8 ವರ್ಷದ ಕಿರಣ್ ಕೊಲೆಯಾಗಿದ್ದಾರೆ. ಇಬ್ಬರ ಕಣ್ಣಿಗೂ ಗಾಯಗಳಾಗಿವೆ.

ಮಧ್ಯಾಹ್ನದ ವೇಳೆ ಮನೆಯಿಂದ ತರಕಾರಿ ಕೀಳಲು ಇಬ್ಬರು ಹೆಣ್ಣು ಮಕ್ಕಳು ಹೋಗಿದ್ದರು. ಅತ್ಯಾಚಾರ ಯತ್ನದ ವೇಳೆ ಮಕ್ಕಳು ಕೊಲೆಯಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.