ಚೀನಾಕ್ಕೆ ವೈರಸ್ ತಂದಿದ್ದು ಅಮೆರಿಕದ ಸೇನೆ- ಉನ್ನತ ಅಧಿಕಾರಿಯಿಂದ ಆರೋಪ

0
1283

ಸನ್ಮಾರ್ಗ ವಾರ್ತೆ

ಬೀಜಿಂಗ್, ಮಾ. 13: ಕೊರೊನಾ ಪ್ರಭಾವ ಕೇಂದ್ರವಾದ ಚೀನದ ವುಹಾನಕ್ಕೆ ಕೋರೋಣ ವೈರಸ್ ತಂದಿರೋದು ಅಮೆರಿಕದ ಸೇನೆ ಎಂದು ಚೀನದ ವಿದೇಶ ವಕ್ತಾರರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಬಗ್ಗೆ ಸಾಕ್ಷ್ಯವನ್ನು ನೀಡದೆ ಚೀನದ ಉನ್ನತ ಅಧಿಕಾರಿ ಚ್ವಾ ಲಿಜಿಯನ್ ಟ್ವೀಟ್ ಮಾಡಿ ಅಮೆರಿಕದ ಮೇಲೆ ಆರೋಪ ಹೊರಿಸಿದ್ದಾರೆ. ಲಿಜಿಯನ್ ಅವರು ವಿದೇಶ ಸಚಿವಾಲಯದ ಮಾಹಿತಿ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಕೂಡಾ ಆಗಿದ್ದಾರೆ. ವುಹಾನ್ ವೈರಸ್ ಎಂದು ಈ ಹಿಂದೆ ಕರೆದಿದ್ದ ಅಮೆರಿಕದ ಅಧಿಕಾರಿಗಳ ವಿರುದ್ಧ ಚೀನದ ಹಿರಿಯ ಆರೋಗ್ಯ ಕಾರ್ಯಕರ್ತರು ರಂಗಪ್ರವೇಶಿಸಿದ್ದರು. ಇದರ ಬೆನ್ನಿಗೆ ಚೀನದಿಂದ ಅಮೆರಿಕದ ವಿರುದ್ಧ ದೊಡ್ಡ ಮಟ್ಟದ ಆರೋಪವನ್ನು ಹೊರಿಸಲಾಗಿದೆ. ಚೀನದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಅನೇಕ ಆರೋಪಗಳು ಹರಿದಾಡುತ್ತಿದೆ.

ವೈರಸಿನ ಕೇಂದ್ರವಾದ ವುಹಾನದ ಮಾಂಸದ ಮಾರುಕಟ್ಟೆಯಿಂದ ವೈರಸ್ ಬಂದಿದೆ ಎಂದು ಚೀನದ ಸೆಂಟರ್ ಫಾರ್ ಡೀಸಿಸ್ ಕಂಟ್ರೋಲ್ ಆಂಡ್ ಪ್ರಿವೇನ್ಶನ್ ಈ ಹಿಂದೆ ಹೇಳಿದ್ದರೂ ಆರೋಪಗಳ ಸರಮಾಲೆ ಮುಂದುವರಿಯುತ್ತಿದೆ.