ಮೋದಿ, ಅಮಿತ್ ಶಾ ವಿರುದ್ಧ ಪ್ರಕರಣ: ಅರ್ಜಿ ತಿರಸ್ಕರಿಸಿದ‌ ಅಮೇರಿಕಾ ಕೋರ್ಟ್

0
555

ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಹತ್ತು ಕೋಟಿ ಡಾಲರ್ ನಷ್ಟ ಪರಿಹಾರವನ್ನು ಕೋರಿ ಸಿಖ್ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ಅಮೇರಿಕಾದ ಟೆಕ್ಸಾಸ್ ಕೋರ್ಟ್ ತಳ್ಳಿಹಾಕಿದೆ.

ಪ್ರಕರಣವು ವಿಚಾರಣೆಗೆ ಎರಡು ಬಾರಿ ದಿನಾಂಕ ನಿಗದಿಯಾಗಿತ್ತು. ಈ ಎರಡು ಸಂದರ್ಭದಲ್ಲಿಯೂ ಅರ್ಜಿದಾರರಾದ ಕಾಶ್ಮೀರ ಖಲಿಸ್ತಾನ್ ರಫರಂಡಂ ಫ್ರಂಟ್ ಹಾಜರಾಗದಿರುವುದು ಅರ್ಜಿ ತಿರಸ್ಕಾರಗೊಳ್ಳಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.