ಇನ್ಫೋಸಿಸ್ ವಿರುದ್ಧ ಅಮೆರಿಕದಲ್ಲಿ ತನಿಖೆ

0
415

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.24: ವಿಸಿಲ್ ಬ್ಲೋವರ್‌ಗಳು ಬಹಿರಂಗ ಪಡಿಸಿದ ಆಧಾರದಲ್ಲಿ ಇನ್ಫೋಸಿಸ್ ವಿರುದ್ಧ ಅಮೆರಿಕದಲ್ಲಿ ತನಿಖೆ ನಡೆಯಲಿದೆ. ಅಮೆರಿಕದ ಸೆಕ್ಯುರಿಟಿ ಆಂಡ್ ಎಕ್ಸ್‌ಚೇಂಜ್ ಕಮಿಷನ್ ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ವಿರುದ್ಧ ತನಿಖೆ ಘೋಷಿಸಿತ್ತು.

ಲಾಭ ಮತ್ತು ವರಮಾನ ಹೆಚ್ಚಿಸಿ ಲೆಕ್ಕದಲ್ಲಿ ಕೃತಕತೆ ನಡೆಸಲಾಗಿದೆ ಎಂದು ಇನ್ಫೋಸಿಸ್ ವಿರುದ್ಧ ಆರೋಪ ಹೊರಿಸಲಾಗಿದೆ. ಈ ಹಿಂದೆ ವಿಸಿಲ್ ಬ್ಲೋವರ್‌ಗಳ ಆರೋಪಕ್ಕೆ ಉತ್ತರಿಸಲು ಬಿಎಸ್‍ಇ ಇನ್ಫೋಸಿಸ್‍ಗೆ ತಿಳಿಸಿದೆ. ಇದರ ಬೆನ್ನಿಗೆ ಅಮೆರಿಕದಲ್ಲಿ ಕಂಪೆನಿ ವಿರುದ್ಧ ತನಿಖೆ ಘೋಷಿಸಲಾಗಿದೆ. ಇದೇ ವೇಳೆ,  ಸೆಬಿ ಕೂಡ ಇನ್ಫೋಸಿಸ್ ವಿರುದ್ಧ ತನಿಖೆ ನಡೆಸುವುದಾಗಿ ಘೋಷಿಸಿದೆ ಎಂದು ವರದಿಯಾಗಿದೆ.