ಮೋದಿ ಸರಕಾರದ ಕೆಲಸಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸೂಕ್ತವಾಗಿಲ್ಲ: ಅಮೆರಿಕ

0
444

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ನಿಯಂತ್ರಣಗಳ ಸಹಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಹಲವಾರು ಕ್ರಮಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸೂಕ್ತವಾಗಿಲ್ಲ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ವಿದೇಶ ಸಚಿವಾಲಯದ ಉಪಸಮಿತಿಯಲ್ಲಿ ಇಂಡೊ-ಫೆಸಿಫಿಕನ್ ಪ್ರಜಾಪ್ರಭುತ್ವದ ಕುರಿತಿರುವ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ದಕ್ಷಿಣ, ಮಧ್ಯಪ್ರಾಚ್ಯ ಸ್ಟೇಟ್ ಆಕ್ಟಿಂಗ್ ಅಸಿಸ್ಟೆಂಟ್ ಕಾರ್ಯದರ್ಶಿ ಡೀನ್ ಥಾಮ್ಸನ್ ಹೇಳಿದ್ದಾರೆ.

ಶಕ್ತಿಶಾಲಿ ಕಾನೂನು ವ್ಯವಸ್ಥೆ, ಸ್ವಾತಂತ್ರ್ಯ, ನ್ಯಾಯಾಂಗ ಇರುವ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಭಾರತ ಮುಂದುವರಿಯುತ್ತಿದೆ. ಅಮೆರಿಕದೊಂದಿಗೆ ಬಲವಾದ ತಂತ್ರಪರವಾದ ಸಂಬಂಧ ಭಾರತ ಹೊಂದಿದೆ. ಆದರೂ ಸರಕಾರದ ಕೆಲವು ಕ್ರಮಗಳು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸೂಕ್ತವಾಗಿಲ್ಲ ಎಂದು ಆತಂಕವನ್ನು ಅಮೆರಿಕ ವ್ಯಕ್ತಪಡಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ನಿಷೇಧ, ಮಾನವಹಕ್ಕು ಕಾರ್ಯಕರ್ತರು, ಪತ್ರಕರ್ತರನ್ನು ಜೈಲಿಗೆ ಹಾಕಿದ್ದು ಇವೆಲ್ಲ ಇದರಲ್ಲಿ ಸೇರಿದೆ. ಸಾಧಾರಣ ಜನರಿಗೆ ಸಂಬಂಧಿಸಿದ ಇಂತಹ ವಿಷಯದಲ್ಲಿ ಅಮೆರಿಕ ಮಧ್ಯ ಪ್ರವೇಶಿಸುವ ರೂಢಿಯನ್ನಿಟ್ಟುಕೊಂಡಿದೆ ಎಂದು ಥಾಮ್ಸನ್ ಹೇಳೀದರು.

ಪಾಕಿಸ್ತಾನದಲ್ಲಿ, ಬಾಂಗ್ಲಾದೇಶದಲ್ಲಿ ಪತ್ರಕರ್ತರ ಮೇಲೆ ಹೇರಲಾದ ಕೆಲವು ನಿಯಂತ್ರಣಗಳ ಕುರಿತು ಅಮೆರಿಕ ಆತಂಕ ವ್ಯಕ್ತಪಡಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಥಾಮ್ಸನ್ ಉತ್ತರಿಸಿದರು. ಅದರಂತೆ ಕೆಲವು ಸಮಯದಿಂದ ಭಾರತದಲ್ಲಿಯೂ ಇದು ಸಂಭವಿಸುತ್ತಿದೆ. ಆದರೂ ಭಾರತದಲ್ಲಿ ಒಟ್ಟಿನಲ್ಲಿ ಬಲವಾದ ಮಾಧ್ಯಮ ಚಟುವಟಿಕೆಗಳು ಹಾಗೂ ಸರಕಾರದ ವಿರುದ್ಧ ಟೀಕೆಗಳಿಗೆ ಸ್ವಾತಂತ್ರ್ಯ ಸಿಗುತ್ತಿದೆ ಎಂದು ಥಾಮ್ಸನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದಲ್ಲಿ ಇಸ್ಲಾಮಿಗೆ ಸಂಬಂಧಿಸಿದ ಹಕ್ಕುಗಳ ಸಮಸ್ಯೆಗಳಲ್ಲಿ ಬೈಡನ್ ಸರಕಾರ ರೂಢಿಗತವಾಗಿ ಎತ್ತುತ್ತದೆ ಎಂದು ಥಾಮ್ಸನ್ ಹೇಳಿದರು. ಕಾಶ್ಮೀರದಲ್ಲಿ ಶೀಘ್ರ ಜನಜೀವನವನ್ನು ಸಾಮಾನ್ಯ ನೆಲೆಗೆ ತರಬೇಕು. ಬಂಧಿಸಿದವರನ್ನು ಬಿಡುಗಡೆಗೊಳಿಸಬೇಕು ಮತ್ತು ಕಾಶ್ಮೀರದಲ್ಲಿ 4ಜಿ ಇಂಟರ್ ನೆಟ್ ವ್ಯವಸ್ಥೆ ಮರು ಸಂಸ್ಥಾಪಿಸಬೇಕೆಂದು ಥಾಮ್ಸನ್ ಹೇಳಿದರು.