50 ಕೋಟಿ ಫೈಝರ್ ವ್ಯಾಕ್ಸಿನ್ ಖರೀದಿಸಿ ಜಗತ್ತಿಗೆ ಕೊಡಲು ಹೊರಟ ಬೈಡನ್: ಜಿ7 ಶೃಂಗ ಸಭೆಯಲ್ಲಿ ಘೋಷಣೆ ಸಾಧ್ಯತೆ

0
187

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: 50 ಕೋಟಿ ಫೈಝರ್ ಕೊರೋನ ವ್ಯಾಕ್ಸಿನ್ ಖರೀದಿಸಿ ಇತರ ದೇಶಗಳಿಗೆ ಕೊಡಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದು, ಜಿ7 ಶೃಂಗ ಸಭೆಯಲ್ಲಿ ಈ ನಿರ್ಧಾರವನ್ನು ಅವರು ಘೋಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ದೊಡ್ಡ ದೊಡ್ಡ ವ್ಯಾಕ್ಸಿನ್ ಕಂಪೆನಿಗಳು ಅಮೆರಿಕದಲ್ಲಿದ್ದು, ಜಗತ್ತಿನಾದ್ಯಂತ ಅನುಭವಿಸುತ್ತಲಿರುವ ವ್ಯಾಕ್ಸಿನ್ ಕೊರತೆ ಪರಿಹರಿಸಲು ಬೈಡನ್ ಕ್ರಮ ಜರಗಿಸಿಲ್ಲ. ವ್ಯಾಪಕ ದೂರು ಇದ್ದ ಹಿನ್ನೆಲೆಯಲ್ಲಿ ಅಮೆರಿಕ ಸರಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕದಲ್ಲಿ ಒಟ್ಟು ಜನಸಂಖ್ಯೆ ಅರ್ಧಕ್ಕೂ ಹೆಚ್ಚು ಮಂದಿ ಈಗಾಗಲೇ ವ್ಯಾಕ್ಸಿನೇಶನ್ ಪೂರ್ಣಗೊಂಡಿದ್ದು ಇದಕ್ಕೆ ಸಮಾನವಾಗಿ ಬ್ರಿಟನ್ ಕೂಡ ತನ್ನ ಪ್ರಜೆಗಳಲ್ಲಿ ಅರ್ಧಾಂಶ ಮಂದಿಗೆ ವ್ಯಾಕ್ಸಿನ್ ಕೊಟ್ಟಾಗಿದೆ. 20 ಕೋಟಿ ವ್ಯಾಕ್ಸಿನ್ ಈ ವರ್ಷ, ಮೂವತ್ತು ಕೋಟಿ ಮತ್ತು ಮುಂದಿನ ವರ್ಷ ಮೂವತ್ತು ಕೋಟಿ ವ್ಯಾಕ್ಸಿನ್ ಅನ್ನು ಅಮೆರಿಕ ರಫ್ತು ಮಾಡಲಿದೆ.

ಇನ್ನೂ ಅಭಿವೃದ್ಧಿಯಾಗದೇ ಉಳಿದ ರಾಷ್ಟ್ರಗಳಿಗೆ ನೆರವಿನ ರೂಪದಲ್ಲಿ ಕೊವಾಕ್ಸಿನ್‍ ಯೋಜನೆಯಡಿಯಲ್ಲಿ ವ್ಯಾಕ್ಸಿನ್ ಹಂಚಲಾಗುತ್ತದೆ.

92 ಬಡ ದೇಶಗಳಿಗೆ ಆಫ್ರಿಕನ್ ಯೂನಿಯನ್‍ಗೆ ವ್ಯಾಕ್ಸಿನ್ ಬಂದು ಸಿಗಲಿದೆ. ಒಟ್ಟು 80 ಕೋಟಿ ವ್ಯಾಕ್ಸಿನ್ ವಿತರಣೆಯಾಗಲಿದೆ ಮತ್ತು ಭಾರತಕ್ಕೆ 60 ಲಕ್ಷ ವ್ಯಾಕ್ಸಿನ್ ಕೊಡಲಾಗುವುದೆಂದು ಅಮೆರಿಕ ಹೇಳಿಕೊಂಡಿತ್ತು.

LEAVE A REPLY

Please enter your comment!
Please enter your name here