ಸೊಳ್ಳೆಗಳ ವಿರುದ್ಧ ರೈಲಿನ ಬಳಕೆ

0
137

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 19: ರೈಲ್ವೆ ಹಳಿಗಳಲ್ಲಿ ವಿಹರಿಸುವ ಸೊಳ್ಳೆಗಳ ನಿರ್ಮೂಲನಕ್ಕೆ ಟರ್ಮಿನೇಟರ್ ರೈಲನ್ನು ಬಳಸುವ ಕಾರ್ಯಕ್ರಮವನ್ನು ದಿಲ್ಲಿ ಮೇಯರ್ ಶೆಲ್ಲಿ ಒಬರಾಯ್ ಉದ್ಘಾಟಿಸಿದರು.

ಭಾರತ ರೈಲ್ವೆ ಮತ್ತು ದಿಲ್ಲಿ ಮುನ್ಸಿಪಾಲಿಟಿ ಕಾರ್ಪೊರೇಷನ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಡೆಂಗ್ಯು ಜ್ವರ ನಿಯಂತ್ರಿಸುವುದು ಗುರಿಯಾಗಿದೆ. ಈ ವರ್ಷ ಆಗಸ್ಟ್‌ನ ಮೊದಲ ವಾರದಲ್ಲಿ ದಿಲ್ಲಿಯಲ್ಲಿ 350 ಡೆಂಗ್ಯು ಜ್ವರ ಪ್ರಕರಣಗಳು ದಾಖಲಾಗಿದೆ.

ಈ ಪರಿಸ್ಥಿತಿಯಲ್ಲಿ ಈ ವಿಶೇಷ  ಸೊಳ್ಳೆ ನಿಯಂತ್ರಣ ಕಾರ್ಯ ವಿಧಾನವನ್ನು ರೈಲ್ವೆ ಮತ್ತು ಕಾರ್ಪೊರೇಷನ್ ಆರಂಭಿಸಿದೆ. ದಿಲ್ಲಿ ರೈಲ್ವೆ ನಿಲ್ದಾಣದ ವಿಐಪಿ ಪ್ಲಾಟ್‍ಫಾರಂ ನಿಂದ ಒಬರಾಯ್ ರೈಲು ಮೂಲಕ ಸೊಳ್ಳೆ ನಿಯಂತ್ರಣ ಕಾರ್ಯ ಶುರುವಾಗಿದ್ದು ಎಲ್ಲ ವರ್ಷವೂ ಹೀಗೆಯೇ ಮಾಡಲಾಗುತ್ತಿದೆ ಎಂದು ವರದಿಯಾಗಿದೆ