ಐ ಲವ್ ಮುಹಮ್ಮದ್ ಬ್ಯಾನರನ್ನು ತೆರವುಗೊಳಿಸಿದ ಉತ್ತರ ಪ್ರದೇಶದ ಪೊಲೀಸರು: ತಾರತಮ್ಯ ಎಂದು ಆರೋಪ

0
437

ಸನ್ಮಾರ್ಗ ವಾರ್ತೆ

ಸಂಘ ಪರಿವಾರದ ದೂರಿನ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಗಾಜಿಯಾಬಾದ್ ನ ಪೊಲೀಸರು ಐ ಲವ್ ಮೊಹಮ್ಮದ್ ಎಂಬ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರಗಳು ಹಾರಿದಾಡುತ್ತಿವೆ. ಕಿದ್ವಾಯಿ ನಗರ್, ಆದರ್ಶ ಕಾಲೋನಿ ಮತ್ತು ಮಲಿಕ್ ನಗರ ಮುಂತಾದ ಪ್ರದೇಶಗಳಲ್ಲಿ ಐ ಲವ್ ಮೊಹಮ್ಮದ್ ಬ್ಯಾನರನ್ನು ಹಾಕಲಾಗಿದ್ದು ಇದು ಸಮಾಜದ ಸೌಹಾರ್ದವನ್ನು ಕೆಡಿಸುತ್ತದೆ ಎಂದು ಸಂಘ ಪರಿವಾರ ಆಕ್ಷೇಪ ಅಗತ್ಯ ಪಡಿಸಿತ್ತು.

ಸಂಘ ಪರಿವಾರದ ನಾಯಕ ಮಧುರ್ ನೆಹರಾ ಅವರು ಎಸಿಪಿ ಅಮಿತ್ ಸಕ್ಸೇನ ಅವರನ್ನು ಭೇಟಿಯಾಗಿ ಈ ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

ನಾವು ನಮ್ಮ ಪ್ರವಾದಿಯ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದೇವೆ. ಇದರಲ್ಲಿ ಕ್ರೈಮ್ ಏನಿದೆ? ಹಿಂದೂ ದೇವ ಮತ್ತು ದೇವತೆಯರ ಬ್ಯಾನರ್‌ಗಳು ಎಲ್ಲೆಡೆ ನಗರದಲ್ಲಿ ಕಾಣಿಸುತ್ತದೆ. ರಾಜಕಾರಣಿಗಳ ಫೋಟೋಗಳು ಕೂಡ ಬ್ಯಾನರ್ ಆಗಿ ಎಲ್ಲೆಡೆ ತೂಗುಹಾಕಲಾಗಿದೆ. ಆದರೆ ಮುಸ್ಲಿಮರನ್ನು ಮಾತ್ರ ತಡೆಯಲಾಗುತ್ತಿದೆ. ಯಾಕೆ ಹೀಗೆ ಎಂದು ಸ್ಥಳೀಯ ನಿವಾಸಿ ಇರ್ಫಾನ್ ಮಲಿಕ್ ಪ್ರಶ್ನಿಸಿದ್ದಾರೆ.

ಐ ಲವ್ ಮೊಹಮ್ಮದ್ ಬ್ಯಾನರನ್ನು ತೆರವು ಗೊಳಿಸಿದ ಬೆನ್ನಿಗೆ ಅದೇ ಜಾಗದಲ್ಲಿ ಹಿಂದೂ ಗುಂಪುಗಳು ಐ ಲವ್ ಯೋಗಿ, ಐ ಲವ್ ಶ್ರೀರಾಮ್, ಐ ಲವ್ ಮಹಾದೇವ್ ಮತ್ತು ಐ ಲವ್ ಬುಲ್ಟೋಝರ್ ಎಂಬ ಬ್ಯಾನರ್‌ಗಳನ್ನು ಹಾಕಿದೆ. ಈ ಬ್ಯಾನರ್ಗಳ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಇದೇ ವೇಳೆ ಉತ್ತರ ಪ್ರದೇಶದ ಆಕ್ಟಿವ್ವಿಸ್ಟುಗಳು ಮತ್ತು ವಕೀಲರು ಕೂಡ ಈ ಬೆಳವಣಿಗೆಯನ್ನು ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಉದ್ದಕ್ಕೂ ಹಿಂದು ದೇವ ದೇವತೆಯರ ಫೋಟೋಗಳ ಬ್ಯಾನರ್‌ಗಳು ರಾರಾಜಿಸುತ್ತಿವೆ. ಹೀಗಿರುವಾಗ ಐ ಲವ್ ಮೊಹಮ್ಮದ್ ಎಂಬ ಬ್ಯಾನರ್ ಅನ್ನು ತೆರವುಗೊಳಿಸುವುದಕ್ಕೆ ಅರ್ಥ ಇಲ್ಲ ಎಂದು ವಕೀಲ ಫಹಿಂ ಅನ್ಸಾರಿ ಹೇಳಿದ್ದಾರೆ.