ಚೀನಾದಿಂದ ಉಯಿಘುರ್ ಮುಸ್ಲಿಮರ ಜನಾಂಗೀಯ ಹತ್ಯೆ: ಇಂಗ್ಲೆಂಡ್‌ನ ಸ್ವತಂತ್ರ ಟ್ರಿಬ್ಯೂನಲ್

0
51

ಸನ್ಮಾರ್ಗ ವಾರ್ತೆ

ಲಂಡನ್: ಶಿಂಜಿಯಾಂಗ್ ಉಯಿಘುರ್ ವಂಶದವರ ಸಹಿತ ಅಲ್ಪಸಂಖ್ಯಾತರ ವಿರುದ್ಧ ಚೀನದಿಂದ ದಮನ, ವಂಶೀಯ ಹತ್ಯೆ ಮತ್ತು ಮಾನವೀಯತೆ ವಿರುದ್ಧ ಅಪರಾಧ ನಡೆಯುತ್ತಿದೆ ಎಂದು ಇಂಗ್ಲೆಂಡಿನ ಸ್ವತಂತ್ರ ಟ್ರಿಬ್ಯೂನಲ್ ಹೇಳಿದೆ. ಜನಸಂಖ್ಯೆ ತಡೆಯಲು ಉಯುಗುರ್ ಮುಸ್ಲಿಮರ ವಿರುದ್ಧ ಚೀನ ಸರಕಾರ ಬಂಜೆತನ ಚಿಕಿತ್ಸೆ ಹಾಗೂ ಕುಟುಂಬ ನಿಯಂತ್ರಣಕ್ಕೆ ಗುರಿಪಡಿಸುತ್ತಿದೆ ಎಂದು ಉಯಿಘುರ್ ಟ್ರಿಬ್ಯೂನಲ್ ಮುಖ್ಯಸ್ಥ, ಪ್ರಮುಖ ಮಾನವಹಕ್ಕು ವಕೀಲ ಸರ್ ಜಿಯೊಪ್ರೆ ನಿಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಉಯಿಘುರ್ ವಂಶೀಯರ ನರಮೇಧ ನಡೆದಿದೆ ಎಂದು ಅವರು ಹೇಳಿದರು.

ಈ ಸ್ವತಂತ್ರ ಟಿಬ್ಯೂನಲ್‍ಗೆ ಬ್ರಿಟಿಷ್ ಸರಕಾರದ ಬೆಂಬಲವಿಲ್ಲ. ಆದ್ದರಿಂದ ಚೀನದ ವಿರುದ್ಧ ದಿಗ್ಬಂಧನ ಹಾಕಲು ಸಾಧ್ಯವಿಲ್ಲ. ಹತ್ತು ಲಕ್ಷ ಉಯಿಘುರ್ ವಂಶೀಯರನ್ನು ಅಧಿಕಾರಿಗಳು ಬಂದಿಖಾನೆಯಲ್ಲಿರಿಸಿದ್ದಾರೆ. ಚೀನದ ಕ್ರಮವನ್ನು ನರಮೇಧ‌ವೆಂದೂ ವಂಶೀಯಹತ್ಯೆ ಎಂದು ಹಲವು ದೇಶಗಳು ಹೇಳುತ್ತಿವೆ.