ಕೊರೊನಾ: ಸೌದಿಯಲ್ಲಿ ಮತ್ತೊಬ್ಬ ಭಾರತೀಯನ ಸಾವು

0
957

ಸನ್ಮಾರ್ಗ ವಾರ್ತೆ

ರಿಯಾದ್, ಎ. 24: ಕೊರೊನ ಪೀಡಿನಾಗಿದ್ದ ಭಾರತೀಯ ಪ್ರಜೆಯೊಬ್ಬ ಸೌದಿ ಅರೇಬಿಯದಲ್ಲಿ ಮೃತಪಟ್ಟಿದ್ದಾನೆ. ಈ ತಿಂಗಳು ಹದಿನೆಂಟಕ್ಕೆ ದಮ್ಮಾಮ್‍ನಲ್ಲಿ ಮಹಾರಾಷ್ಟ್ರದ 49 ವರ್ಷದ ಶೇಖ್ ಉಬೈದುಲ್ಲಾ ಮೃತಪಟ್ಟಿದ್ದಾರೆ. ಐದು ದಿನದ ನಂತರ ಸೌದಿ ಅರೇಬಿಯದ ಆರೋಗ್ಯ ಸಚಿವಾಲಯದಿಂದ ಸಿಕ್ಕಿದ ವಿವರದ ಆಧಾರದಲ್ಲಿ ಭಾರತದ ಧೂತಾವಾಸ ಇವರ ಸಾವನ್ನು ಅಧಿಕೃತವಾಗಿ ದೃಢೀಕರಿಸಿತು. ಇದರೊಂದಿಗೆ ಕೊರನಾದಿಂದ ಸೌದಿಯಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ ಹನ್ನೊಂದಕ್ಕೇರಿಕೆಯಾಗಿದೆ.

ಕಣ್ಣೂರಿನ ಪಾನೂರು ಎಂಬಲ್ಲಿನ ಶಾಬ್‍ನಾಝ್ (29) ಅವರು ಮದೀನಾದಲ್ಲಿ ಮತ್ತು ರಿಯಾದ್‍ನಲ್ಲಿ ಮಲಪುರಂನ ಸಾಫ್‍ಕಾನ್(41) ಮೃತಪಟ್ಟಿದ್ದರು. ಮೊದಲ ಬಾರಿ ದೃಢೀಕರವಾದ ಕೊರನಾ ಸಾವು ಇವರಿಬ್ಬರದಾಗಿತ್ತು. ಈ ತಿಂಗಳು ಏಳಕ್ಕೆ ಉತ್ತರಪ್ರದೇಶದ ಸಯ್ಯಿದ್(59), ತೆಲಂಗಾಣದ ಅಲಿ ಅಬ್ದುಲ್ಲ ಖಾನ್ (65) ಮಕ್ಕದಲ್ಲಿ ಮೃತಪಟ್ಟಿದ್ದರು. ಮಹಾರಾಷ್ಟ್ರದ ಬರ್ಕತ್ ಅಲಿ ಅಬ್ದುಲ್ ಫಕೀರ್ (63) ಮದೀನದಲ್ಲಿ, ತೆಲಂಗಾಣದ ಮುಹಮ್ಮದ್ ಸಾದಿಕ್ (63) ಜಿದ್ದದಲ್ಲಿ ಉತ್ತರ ಪ್ರದೇಶದ ಮುಹಮ್ಮದ್ ಅಸ್ಲಂ ಖಾನ್(61) ಮಕ್ಕದಲ್ಲಿ ಮಹಾರಾಷ್ಟ್ರದ ತೌಸಿಫ್ ಬಾಲ್‍ಬಾಲ(40) ಮದೀನದಲ್ಲಿ, ಉತ್ತರಪ್ರದೇಶದ ಮುಹಮ್ಮದ್ ಫಕೀರ್ ಆಲಂ(61) ಮಕ್ಕದಲ್ಲಿ ಮೃತಪಟ್ಟ ಇತರರಾಗಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.