ಗೆಲುವಿನ ಆತ್ಮವಿಶ್ವಾಸ: ಎಲ್ಲವೂ ತಮಗೆ ಅನುಕೂಲಕರವಾಗಿದೆ ಎಂದ ಟ್ರಂಪ್

0
582

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.4: ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಡೆಮಕ್ರಾಟಿಕ್ ಅಭ್ಯಥಿ ಜೊ ಬೈಡನ್‍ರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬರುತ್ತಿದೆ. ಇದರ ನಡುವೆಯೂ ತಾನೇ ಗೆಲ್ಲುವುದು ಎಂಬುದಾಗಿ ಡೊನಾಲ್ಡ್ ಟ್ರಂಪ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದುದ್ದಕ್ಕೂ ತುಂಬ ಉತ್ತಮ ಫಲಿತಾಂಶ ಕಂಡುಬರುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಕೃತಜ್ಞತೆಗಳು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಆದರೆ ಎರಡೂ ಪಕ್ಷಗಳಿಗೂ ದೇಶದಲ್ಲಿ ಅನುಕೂಲಕರ ಪರಿಸ್ಥಿತಿ ಇದೆ ಎಂದು ಹೇಳುತ್ತಿವೆ. ಫ್ಲೊರಿಡಾ, ಟೆಕ್ಸಾಸ್‍ನಲ್ಲಿ ಎರಡು ಪಾರ್ಟಿಯೂ ಭಾರೀ ಹೋರಾಟದಲ್ಲಿದೆ.

ಚುನಾವಣೆಯಲ್ಲಿ ಸೋತರೆ ಒಂದುವೇಳೆ ತಾನು ದೇಶ ತೊರೆಯಬೇಕಾದೀತೆಂದು ಚುನಾವಣೆಯ ಪ್ರಚಾರದ ವೇಳೆ ಟ್ರಂಪ್ ಹೇಳಿದ್ದರು. ಚುನಾವಣೆಯಲ್ಲಿ ಸೋತರೆ ತಾನಿನ್ನು ಈ ದೇಶಕ್ಕೆ ಬರುವುದಿಲ್ಲ ಎಂಬ ರೀತಿಯಲ್ಲಿ ಅವರ ಪ್ರಚಾರ ಶೈಲಿಯಿತ್ತು.

ಆದರೆ ಟ್ರಂಪ್ ಹೇಳಿದಂತೆ ಇರುವೆ ಎಂದು ಮಾತುಕೊಡ್ತಾರಾ ಎಂದು ಬೈಡನ್ ಹೇಳಿದ್ದರು. ಕೊರೋನ ಪ್ರತಿರೋಧದಲ್ಲಿ ವಿಫಲವಾಗಿದ್ದನ್ನು ಬೈಡನ್ ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು.