✍️ ಏಜಾಝ್ ಅಹ್ಮದ್ ಅಸ್ಲಮ್
ಅನು: ಮುಹಮ್ಮದ್ ಮರಕಡ
ಭವಿಷ್ಯವನ್ನು ನಿಖರವಾಗಿ ಊಹಿಸುವುದು ಅಸಾಧ್ಯವಾದರೂ ಒಂದು ದೇಶದ ಸ್ಥಿತಿಯನ್ನು ನಿರ್ಧರಿಸುವಲ್ಲಿ ಜಿಡಿಪಿ ಮಹತ್ವದ ಪಾತ್ರ ವಹಿಸುತ್ತದೆ. ಅದರ ಆಧಾರದ ಮೇಲೆ ನಾವು ಬಹುಮಟ್ಟಿಗೆ ಊಹಿಸಬಹುದು.
ಪ್ರಸ್ತುತ, ಟಾಪ್ 10 ದೇಶಗಳ ಜಿಡಿಪಿ (ಟ್ರಿಲಿಯನ್ ಡಾಲರ್ಗಳಲ್ಲಿ) ಈ ಕೆಳಗಿನಂತಿದೆ:
(1) ಅಮೆರಿಕ: 30.5 ಟಿ (2) ಚೀನಾ: 19.23 ಟಿ (3) ರ್ಮನಿ: 4.74 ಟಿ (4) ಭಾರತ: 4.18 ಟಿ (5) ಜಪಾನ್: 4.18 ಟಿ (6) ಯುಕೆ: 3.83 ಟಿ (7) ಫ್ರಾನ್ಸ್: 3.2 ಟಿ (8) ಇಟಲಿ: 2.42 ಟಿ (9) ಕೆನಡಾ: 2.22 ಟಿ (10) ಬ್ರೆಜಿಲ್: 2.12 ಟಿ
ಆದರೆ, ಜಿಡಿಪಿಯೇ ಒಂದು ದೇಶವನ್ನು ಅಳೆಯುವ ಏಕೈಕ ಮಾನದಂಡವಲ್ಲ. ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ, ಶಿಕ್ಷಣ, ಪೂರ್ಣವಾಗದೆ ಉಳಿದಿರುವ ಯೋಜನೆಗಳು, ಸೈನಿಕ ಬಲ, ರಾಜತಾಂತ್ರಿಕ ಸಂಬಂಧಗಳು ಇವು ಕೂಡ ಅತಿ ಮುಖ್ಯವಾಗಿವೆ. ಇತ್ತೀಚಿನ ಸಮೀಕ್ಷೆಗಳು ಮತ್ತು ಮುನ್ನೋಟಗಳು, 2030ರ ವೇಳೆಗೆ ಶ್ರೇಷ್ಠ ದೇಶ ಯಾವುದು ಎನ್ನುವುದನ್ನು ಸೂಚಿಸುತ್ತವೆ. ಇದೂ ಅಲ್ಲದೆ ಮಾನವ ಅಭಿವೃದ್ಧಿ ಸೂಚ್ಯಂಕ (ಊಆI) ಕೂಡ ಪ್ರಮುಖ ಅಂಶವಾಗಿರುತ್ತದೆ. 2030ರಲ್ಲಿ ಮಾನವತೆಗೆ ಭವಿಷ್ಯ ರೂಪಿಸುವಂತೆ ಇರುವ ಟಾಪ್ 10 ದೇಶಗಳು ಈ ಕೆಳಗಿನಂತಿರಬಹುದೆಂದು ನಿರೀಕ್ಷಿಸಲಾಗಿದೆ:
(1) ಚೀನಾ (2) ಭಾರತ (3) ಅಮೆರಿಕ (4) ಇಂಡೋನೇಷಿಯಾ (5) ಟರ್ಕಿ (6) ಬ್ರೆಜಿಲ್ (7) ಈಜಿಪ್ಟ್ (8) ರಷ್ಯಾ (9) ಜಪಾನ್ (10) ಜರ್ಮನಿ. ಈ ಲೆಕ್ಕಾಚಾರದ ಪ್ರಕಾರ ನಮ್ಮ ದೇಶವು ಜಗತ್ತಿನಲ್ಲಿ ಎರಡನೇ ಅತಿ ಪ್ರಮುಖ ರಾಷ್ಟçವಾಗಬಹುದು ಮತ್ತು ಜಾಗತಿಕ ಮಟ್ಟದಲ್ಲಿ ದೊಡ್ಡ ಪಾತ್ರವನ್ನು ವಹಿಸ ಬಹುದು ಎಂಬುದು ಭಾರತೀಯರಿಗೆ ಸಂತೋಷದ ಸಂಗತಿಯಾಗಿದೆ.
ಆದರೆ, ನಮ್ಮ ದೇಶದ ಆಂತರಿಕ ಪರಿಸ್ಥಿತಿ ತೃಪ್ತಿಕರವಾದುದಲ್ಲ. ನಾವು ನೈತಿಕತೆ ಹಾಗೂ ನ್ಯಾಯಬುದ್ಧಿಯ ಕೊರತೆಯಿಂದ ಬಳಲುತ್ತಿದ್ದೇವೆ. ನಾಗರಿಕ ಜಾಗೃತಿ kami ಇದೆ. ನಮ್ಮ ನ್ಯಾಯವ್ಯವಸ್ಥೆ ಸಾಮಾನ್ಯ ಜನರಿಗೆ, ವಿಶೇಷವಾಗಿ ಬಡವರು ಮತ್ತು ನಿರ್ಗತಿಕರಿಗೆ, ತಲುಪುವುದಿಲ್ಲ. ಅವರಿಗೆ ನ್ಯಾಯ ದೊರಕುವುದಿಲ್ಲ. ಇಂದಿನ ವ್ಯವಸ್ಥೆ ಅಪರಾಧಿಗಳು, ಲಂಚಕೋರರು ಮತ್ತು ಸ್ವಾರ್ಥಪರ ಹಿತಾಸಕ್ತಿಗಳ ಹಿಡಿತದಲ್ಲಿದೆ.. ದೇಶದ ಸಂಪತ್ತು ಮತ್ತು ಸಂಪನ್ಮೂಲಗಳು ಕೇವಲ 5% ಶ್ರೀಮಂತರ ಕೈಯಲ್ಲೇ ಸೀಮಿತವಾಗಿವೆ. ರಾಜಕೀಯ ವರ್ಗದಲ್ಲಿ ನೈತಿಕತೆ, ನಿಷ್ಠೆ ಹಾಗೂ ನಿಸ್ವಾರ್ಥ ಸೇವೆಯ ಅಭಾವ ಸ್ಪಷ್ಟವಾಗಿದೆ. ಬಹು ಮಂದಿ ಸ್ವಾರ್ಥಪರರು, ಅಸತ್ಯವಂತರು ಹಾಗೂ ಇತರೆ ಸಮುದಾಯಗಳ ಬಗ್ಗೆ ಯಾವುದೇ ಸಹಾನುಭೂತಿ ತೋರಿಸುವುದಿಲ್ಲ.
ಅದಾಗಿಯೂ ನಮ್ಮ ದೇಶದಲ್ಲಿ ಅನೇಕ ಸಕಾರಾತ್ಮಕ ಅಂಶಗಳಿವೆ. ದೇಶದ 145 ಕೋಟಿ ಜನರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆ ನಮ್ಮಲ್ಲಿದೆ. ಅವರಿಗೆ ಶಿಕ್ಷಣ ಮತ್ತು ತರಬೇತಿ ನೀಡಿದರೆ, ಅವರು ದೇಶಕ್ಕೂ ಮಾನವಕುಲಕ್ಕೂ ಅಮೂಲ್ಯ ಸಂಪತ್ತಾಗಬಹುದು.
ಈ ವಿಷಯದಲ್ಲಿ ನಮ್ಮ ಇಂದಿನ ರಾಜಕೀಯ ವರ್ಗ ಹಿಂದುಳಿದಿದ್ದು, ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಪ್ರಸ್ತುತ ಆಡಳಿತದ “ಒಡೆದು ಆಳುವ” ನೀತಿ ಆತಂಕಕಾರಿಯಾಗಿದೆ. ಆಡಳಿತ ಪಕ್ಷವು ಮುಸ್ಲಿಮರು,ಕ್ರೈಸ್ತರು, ದಲಿತರು ಹಾಗೂ ಇತರ ಹಿಂದುಳಿದವರ ವಿರುದ್ಧ ದ್ವೇಷ, ಭೇದಭಾವ ಮತ್ತು ಅನ್ಯಾಯದ ಮೇಲೆ ನೆಲೆ ನಿಂತಿದೆ. ಬಿಜೆಪಿಯ ಮುಸ್ಲಿಮರನ್ನು ಗುರಿಯಾಗಿಸುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಆದ್ದರಿಂದ ಆಡಳಿತದಲ್ಲಿರುವ ಬಿಜೆಪಿ ದ್ವೇಷ ಮತ್ತು ಭೇದಭಾವದ ನೀತಿಯನ್ನು ಬದಲಿಸಿ, ಎಲ್ಲರನ್ನು ಒಳಗೊಂಡ ವಿಶಾಲವಾದ ಮತ್ತು ಧರ್ಮ ನಿರಪೇಕ್ಷ ನೀತಿಯನ್ನು ಅನುಸರಿಸಬೇಕು. ಇಲ್ಲದಿದ್ದರೆ ಆಡಳಿತ ಬದಲಾವಣೆ ಅಗತ್ಯ. ನಾವು ಭಾರತೀಯರು ಆಡಳಿತ ವರ್ಗದ ಮನೋಭಾವವನ್ನು ಬದಲಿಸಿ, ಅದನ್ನು ಸರಿಯಾದ ದಾರಿಗೆ ತರುವಲ್ಲಿ ಯಶಸ್ವಿಯಾದರೆ ಅದು ದೇಶಕ್ಕೆ ಒಳ್ಳೆಯದು. ದೇಶದ ಸಮಗ್ರ ಕಲ್ಯಾಣಕ್ಕಾಗಿ ಸಕಾರಾತ್ಮಕ ನೀತಿಗಳೇ ಅಗತ್ಯ. ಧರ್ಮಾಧಾರಿತ ಭೇದಭಾವವಿಲ್ಲದ, ದ್ವೇಷರಹಿತ ದೃಷ್ಟಿಕೋನ ಅನಿವಾರ್ಯ. ಇಲ್ಲವಾದರೆ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಶ್ರೇಷ್ಠತೆಯ ಮಹಾ ದೇಶವಾಗುವ ಕನಸು ಕೇವಲ ಕನಸಾಗಿಯೇ ಉಳಿಯುತ್ತದೆ.












