ದ‌.ಕ. ದಲ್ಲಿ ನಾಳೆ ವಾರಾಂತ್ಯದ ಕರ್ಫ್ಯೂ: ಹಾಲು, ದಿನಪತ್ರಿಕೆ, ಹಾಪ್ ಕಾಮ್ಸ್ ಗೆ ಮಾತ್ರ ಅವಕಾಶ

0
875

ಸನ್ಮಾರ್ಗ ವಾರ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ (ಶನಿವಾರ & ಆದಿತ್ಯವಾರ) ವಾರಾಂತ್ಯದ ಕೊರೋನಾ ಕರ್ಫ್ಯೂ ಇರಲಿದ್ದು, ಹಾಲು, ದಿನಪತ್ರಿಕೆ ವಿತರಕರು ಹಾಗೂ ಹಾಪ್ ಕಾಮ್ಸ್ ಗಳನ್ನು ಮಾತ್ರ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ‌.

ಬೆಳಗ್ಗೆ 6 ಗಂಟೆಯಿಂದ 9 ರವರೆಗೆ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಆನ್‍ಲೈನ್ ಫುಡ್ ಡೆಲಿವರಿ ಮಾಡುವ ಸ್ವಿಗ್ಗಿ, ಝೊಮೇಟೋ ಇತ್ಯಾದಿಯವರಿಗೆ ಸೇವೆ ಒದಗಿಸಲು ಹೋಟೆಲ್‍ಗಳು ಮತ್ತು ರೆಸ್ಟೊರೆಂಟ್‍ಗಳಿಂದ ಪಾರ್ಸೆಲ್ ಸೇವೆಗೆ ಅನುಮತಿ ನೀಡಲಾಗಿದೆ.

ಆನ್‍ಲೈನ್‍ ಆಹಾರ ಸೇವಾ ಪೂರೈಕೆದಾರರಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

ಸಾರ್ವಜನಿಕರು ಜಿಲ್ಲಾಡಳಿತದಿಂದ ನೀಡಲಾಗುವ ನಿರ್ದೇಶನಗಳನ್ನು ಪಾಲಿಸಿ ಕೋವಿಡ್ -19 ನಿಯಂತ್ರಣಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.