ಕೊರೋನ ಕಾಲದ ಆಹಾರ…

0
8272

ಸನ್ಮಾರ್ಗ ವಾರ್ತೆ

ಲೇಖಕರು:ಸಜ್‍ಲಾ ಜಲೀಲ್

ಲಾಕ್ಡೌನ್ ವೇಳೆ ಮನೆಯಲ್ಲಿ ಕೂರುವುದು ಹೆಚ್ಚುತ್ತಾ ಹೋಗುವುದರಿಂದ ಕೊರೋನದ ಜೊತೆ ಬದುಕಲು ಜಗತ್ತು ಕಲಿಯುತ್ತಿದೆ. ವ್ಯಕ್ತಿ ಶುಚಿತ್ವ ರೋಗಪ್ರತಿರೋಧ ಶಕ್ತಿ ಹೆಚ್ಚಿಸಿದಲ್ಲಿ ಕೊರೋನವನ್ನು ಎದುರಿಸಬಹುದು. ಕೊರೋನ ಪ್ರತಿರೋಧ ಆಹಾರ ಸೇವನೆ ಇಲ್ಲಿ ಮುಖ್ಯವಾಗಿದೆ.

ವಿಶ್ವ ಆರೋಗ್ಯ ಸಂಘಟನೆಯು ಹೇಳಿದ್ದರಿಂದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಏನೆಲ್ಲ ಆಹಾರ ಸೇವಿಸಬೇಕು ಎನ್ನುವುದು ಪ್ರಧಾನ. ಪೋಷಕಾಹಾರ ಕೊರತೆ, ಅನಾರೋಗ್ಯಕರ ಆಹಾರ ಅಭ್ಯಾಸ ರೋಗ ಪ್ರತಿರೋಧ ಶಕ್ತಿಯನ್ನು ಕಡಿಮೆಗೊಳಿಸಿ ರೋಗಕ್ಕೆ ಕಾರಣವಾಗಬಹುದು. ಆದ್ದರಿಂದ ಸಮೀಕೃತ ಆಹಾರ ಅಭ್ಯಾಸ ಮಾಡಿಕೊಳ್ಳಿರಿ.

ಧಾನ್ಯಗಳು:

ಸಂಸ್ಕರಿಸಿದ ಧಾನ್ಯಗಳನ್ನು ಬಳಸುವ ಬದಲು ತೌಡು ಇರುವ ಧಾನ್ಯಗಳನ್ನು ಉಪಯೋಗಿಸಿ. ಭತ್ತ, ರಾಗಿ, ಗೋಧಿ ಇತ್ಯಾದಿ. ತೌಡಲ್ಲಿ ನಿಯಾಸಿಲ್, ತೈಮಿನ್, ಫಾಲಿಕ್ ಆಸಿಡ್ ಇರುವ ವಿಟಮಿನ್‍ಗಳೂ ಝಿಂಕ್, ಕಬ್ಬಿಣ ಸತ್ವ, ಮ್ಯಾಗ್ನೀಷ್ಯಂ, ಮ್ಯಾಂಗನೀಸ್ ಧಾತುಗಳು ಇವೆ.

ಹಣ್ಣು ತರಕಾರಿ:

ಸಿಹಿ ಕಡಿಮೆ ಇರುವ ಹಣ್ಣು ಆಯ್ಕೆ ಮಾಡಿಕೊಳ್ಳಿರಿ. ಆರೆಂಜ್, ಮುಸಂಬಿ,ಸೇಬು, ಪಪ್ಪಾಯಿ, ದ್ರಾಕ್ಷೆ, ದಾಳಿಂಬೆ ತಿನ್ನಿರಿ. ದಿನಕ್ಕೆ ಐದು ಕಪ್ ಎಂಬ ಲೆಕ್ಕದಲ್ಲಿ ತೆಗೆದುಕೊಳ್ಳಿರಿ. ಇದೇ ಲೆಕ್ಕದಲ್ಲಿ ಹಸಿರು ತರಕಾರಿ ದಿನಾಲೂ ಆಹಾರದಲ್ಲಿ ಇರಲಿ. ತರಕಾರಿ ತೆಗೆದುಕೊಳ್ಳುವಾಗ ಸೊಪ್ಪು ಪದಾರ್ಥಗಳು ಹಸಿರು, ಆರೆಂಜ್ ಬಣ್ಣದ್ದು ಇರಲಿ. ವಿಟಮಿನ್‍ನ ಪ್ರಧಾನ ಮೂಲ ಹಣ್ಣುಗಳು ಮತ್ತು ಹಸಿರು ತರಕಾರಿಗಳು ಆಗಿವೆ.

ಮಾಂಸಾಹಾರ:

ಮಾಂಸ ಅಥವಾ ಪ್ರೊಟೀನ್ ಇರುವ ವರ್ಗಗಳು, ಮೀನು, ಮೊಟ್ಟೆ ಇವುಗಳಲ್ಲಿ ಯಾವುದಾದರೊಂದನ್ನು ಕಡ್ಡಾಯವಾಗಿ ಆಹಾರದಲ್ಲಿ ಬಳಸಬೇಕು. ಒಮೇಗಾ-3 ಧಾರಳ ಇರುವ ಸಣ್ಣ ಮೀನುಗಳನ್ನು ಉಪಯೋಗಿಸಬಹುದು. ಮೊಟ್ಟೆಯ ಹಳದಿಯಲ್ಲಿ ಫ್ಯಾಟ್ ಹೆಚ್ಚಿದೆ ಆದ್ದರಿಂದ ಒಂದು ದಿವಸಕ್ಕೆ ಒಂದಕ್ಕಿಂತ ಹೆಚ್ಚು ಬೇಡ. ಬದಲಿಯಾಗಿ ಎರಡು ಮೊಟ್ಟೆಯ ಬಿಳಿಯನ್ನು ಉಪಯೋಗಿಸಬಹುದು. ಜೀರ್ಣ ಕ್ರಿಯೆ ಉತ್ತಮ ಪಡಿಸಲು ಮೊಸರು ಅಭ್ಯಾಸ ಮಾಡಬೇಕು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.