ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.11: ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಕೋರ್ಟು ನಿಂದೆ ಕ್ರಮವನ್ನು ಜರಗಿಸಲು ಸುಪ್ರೀಂಕೋರ್ಟು ಮುಂದಾಗಿದೆ.
ವಿವರವಾಗಿ ವಾದವನ್ನು ಆಲಿಸಲು ಜಸ್ಟಿಸ್ ಅರುಣ್ ಮಿಶ್ರ ಅಧ್ಯಕ್ಷತೆಯ ಪೀಠ ನಿರ್ಧರಿಸಿತು. 2009ರಲ್ಲಿ ತೆಹಲ್ಕಾಕ್ಕೆ ನೀಡಿದ ಸಂದರ್ಶನದಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ಸುಪ್ರೀಂಕೋರ್ಟು ಚೀಫ್ ಜಸ್ಟಿಸ್ಗಳು ಭ್ರಷ್ಟಾಚಾರಿಗಳೆಂದು ಹೇಳಿದ್ದು, ಕೋರ್ಟು ನಿಂದೆ ಆಗಬಹುದೇ ಎಂದು ವಿವರವಾಗಿ ವಾದ ಆಲಿಸಲು ತೀರ್ಮಾನಿಸಲಾಗಿದೆ. ಆಗಸ್ಟ್ 17ಕ್ಕೆ ವಾದ ಆರಂಭವಾಗಲಿದೆ.
ಸುಪ್ರೀಮಕೋರ್ಟು ಸಾಧಾರಣವಾಗಿ ತೆರೆದ ಕೋರ್ಟಿಗೆ ವಾದದ ಸಮಯದಲ್ಲಿ ಪ್ರಕರಣವನ್ನು ವರ್ಗಾಯಿಸಬೇಕೆಂದು ಪ್ರಶಾಂತ್ ಭೂಷಣ್ ತಂದೆ ಕಾನೂನು ತಜ್ಞ, ಮಾಜಿ ಕೇಂದ್ರ ಸಚಿವ ಶಾಂತಿ ಭೂಷಣ್ ಆಗ್ರಹಿಸಿದರೂ ಅರುಣ್ ಮಿಶ್ರಾ ಒಪ್ಪಲಿಲ್ಲ.
ಈ ತಿಂಗಳು 4ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ವಾದ ಆಲಿಸಿದಾಗ ಹತ್ತು ನಿಮಿಷ ಕಳೆದಾಗ ಧ್ವನಿಯನ್ನು ರಹಸ್ಯಗೊಳಿಸಿ ವಿಚಾರಣೆ ನಡೆದಿತ್ತು. ಪ್ರಶಾಂತ್ ಭೂಷಣ್ಗಾಗಿ ಹಾಜರಾದ ಹಿರಿಯ ವಕೀಲ ರಾಜೀವ್ ಧವನ್ರೊಂದಿಗೆ ಫೋನ್ ಮೂಲಕ ವಾದಿಸಲು ಜಸ್ಟಿಸ್ ಅರುಣ್ ಮಿಶ್ರ ಸೂಚಿಸಿದರು.
ಇದೇ ಪ್ರಕರಣದಲ್ಲಿ ಸಂದರ್ಶನ ಪ್ರಕಟಿಸಿದ ತೆಹಲ್ಕಾದ ಸಂಪಾದಕ ತರುಣ್ ತೇಜ್ಪಾಲ್ರಿಗಾಗಿ ಹಾಜರಾದ ಕಪಿಲ್ ಸಿಬಲ್ರಿಗೂ ಇದೇ ರೀತಿ ವಾದ ಮಂಡಿಸಲು ಅರುಣ್ ಮಿಶ್ರ ಅಧ್ಯಕ್ಷತೆಯ ಪೀಠ ಆದೇಶಿಸಿತು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












