ಆ 315 ಮಂದಿ ಎಲ್ಲಿದ್ದಾರೆ? ಕುವೈಟ್ ಪ್ರಶ್ನೆ

0
263

ಸನ್ಮಾರ್ಗ ವಾರ್ತೆ

1990ರಲ್ಲಿ ಕುವೈತ್ ಮೇಲೆ ಇರಾಕ್ ಆಕ್ರಮಣ ನಡೆಸಿದ ಬಳಿಕ ಕಾಣೆಯಾದ 315 ಮಂದಿ ಕುವೈತ್ ನಾಗರಿಕರು ಇನ್ನೂ ಪತ್ತೆಯಾಗದಿರುವುದು ಚರ್ಚೆಯಲ್ಲಿದೆ. ಇವರ ಮಾಹಿತಿಯನ್ನು ತಕ್ಷಣವೇ ನಮಗೆ ಕೊಡಬೇಕು ಎಂದು ಇರಾಕ್ ಸರಕಾರಕ್ಕೆ ಕುವೈತ್ ಕರೆ ನೀಡಿದೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತಾಡುತ್ತಾ ಯುದ್ಧದ ಸಮಯದಲ್ಲಿ ಬಂಧನಕ್ಕೆ ಈಡಾದವರು ಮತ್ತು ಕಾಣೆಯಾದವರ ಕುರಿತು ವಿದೇಶಾಂಗ ಸಚಿವ ರಬೀಆ ಅಲ್ ಅದ್ ಸಾನಿ ಗಮನ ಸೆಳೆದಿದ್ದಾರೆ

ಇರಾಕ್ ಆಕ್ರಮಣದ 35 ವರ್ಷಗಳ ನಂತರವೂ ಈ ವಿಷಯದಲ್ಲಿ ಹಿಂದಿನ ಇರಾಕಿ ಆಡಳಿತದ ಭಾಗವಾಗಿದ್ದ ಮತ್ತು ಆ ಬಳಿಕ ಜೈಲಿನಲ್ಲಿದ್ದ ಒಂಬತ್ತು ಅಧಿಕಾರಿಗಳನ್ನು ಪ್ರಶ್ನಿಸಲಾಗಿಲ್ಲ. ಅವರನ್ನು ಪ್ರಶ್ನಿಸುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಇರಾಕ್ ಭರವಸೆ ನೀಡಿದ್ದರೂ ಅದು ಪೂರ್ಣಗೊಂಡಿಲ್ಲ.ಕುವೈತ್ ಮೇಲಿನ ಆಕ್ರಮಣದ ಸಮಯದಲ್ಲಿ ಕುವೈತಿನಲ್ಲಿ ಇರಾಕಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಮಾಜಿ ಅಧಿಕಾರಿಯನ್ನು 2020ರ ಫೆಬ್ರವರಿಯಲ್ಲಿ ಗಲ್ಲಿಗೇರಿಸಲಾಯಿತು. ಈ ಮೂಲಕ ಅವರನ್ನು ಪ್ರಶ್ನಿಸುವ ಅವಕಾಶವೂ ತಪ್ಪಿ ಹೋಗಿದೆ. ಕುವೈತಿನಿಂದ ಕಣ್ಮರೆಯಾದ 150 ರಿಂದ 180 ಜನರ ಅವಶೇಷಗಳು ಖುಮೈಸಿಯಲ್ಲಿದೆ ಎಂಬ ಸೂಚನೆಗಳಿವೆ