ಮುಸ್ಲಿಂ ವ್ಯಾಪಾರಿಗಳಿಂದ ತರಕಾರಿ ಖರೀದಿಸಬೇಡಿ ಹೇಳಿಕೆ: ಶಾಸಕನ ಮೇಲೆ ಸಿಟ್ಟಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

0
992

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 29: ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಶಾಸಕರೊಂದಿಗೆ ಬಿಜೆಪಿ ವಿವರಣೆಯನ್ನು ಕೇಳಿದೆ. ಮುಸ್ಲಿಂ ವ್ಯಾಪಾರಿಗಳಿಂದ ತರಕಾರಿ ಖರೀದಿಸಬೇಡಿ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಶ್ ತಿವಾರಿ ಕಳೆದ ದಿವಸ ಹೇಳಿದ್ದರು. ದೇಶ ಕೊರೊನಾ ವೈರಸ್ ಭೀತಿಯನ್ನು ಎದುರಿಸುತ್ತಿರುವ ಸಮಯದಲ್ಲಿ ನಾಯಕರು ಇಂತಹ ಹೇಳಿಕೆಗಳನ್ನು ನೀಡುವುದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರನ್ನು ಘಾಸಿಗೊಳಿಸಿದೆ ಎಂದು ಪಾರ್ಟಿ ಮೂಲಗಳು ತಿಳಿಸಿವೆ. ದೇಶದಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಯುತ್ತಿರುವ ಸಂದರ್ಭದಲ್ಲಿ ಡಿಯೊರ ಶಾಸಕ ಈ ದ್ವೇಷಪೂರಿತ ಹೇಳಿಕೆ ನೀಡಿದ್ದಾನೆ. ಒಂದು ವಿಷಯ ನಾನು ಬಹಿರಂಗವಾಗಿ ಹೇಳುತ್ತೇನೆ. ಮುಸ್ಲಿಂ ವ್ಯಾಪಾರಿಗಳಿಂದ ತರಕಾರಿ ಖರೀದಿಸುವ ಯಾವುದೇ ಅಗತ್ಯ ಇಲ್ಲ” ಎಂದು ಶಾಸಕ ಹೇಳಿದ್ದಾನೆ. ತನ್ನ ಹೇಳಿಕೆಯ ವಿರುದ್ಧ ವ್ಯಾಪಕ ಪ್ರತಿಭಟನೆ ಎದ್ದಾಗ ನಾನು ಏನಾದರೂ ತಪ್ಪು ಹೇಳಿದೆನೇ ಎಂದು ತಿವಾರಿ ಪ್ರತಿಕ್ರಿಯಿಸಿದ್ದಾನೆ.

ಇಂತಹ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ ಎಂದು ಜೆಪಿ ನಡ್ಡ ಹೇಳಿದರು. ಇದರ ಕುರಿತು ತನಿಖೆ ನಡೆಯಲಿದೆ. ರಾಜ್ಯಘಟಕಕ್ಕೆ ಸೂಚನೆ ನೀಡಲಾಗಿದೆ. ಇಂತಹ ದ್ವೇಷದ ಹೇಳಿಕೆಗಳಿಂದ ದೂರ ಇರಿ ಎಂದು ಬಿಜೆಪಿ ನಾಯಕರಿಗೆ ಜೆಪಿ ನಡ್ಡ ಕೇಳಿಕೊಂಡಿದ್ದಾರೆ. ಭಾರತದಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಪ್ರಚಾರ ಅತ್ಯಂತ ತೀವ್ರವಾಗಿ ಹರಡುತ್ತಿರುವುದನ್ನು ವಿರೋಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಪ್ರತಿಭಟನೆ ವ್ಯಕ್ತವಾಗುತ್ತಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.