ಹೂ ಈಸ್‌ ಹೇಟೆಡ್‌! ಹೂ ಈಸ್‌ ಡೆಮಲೈಸ್ಡ್‌

0
293

✍️ ಅರಫಾ ಮಂಚಿ

ಉಮರ್ ಖಾಲಿದ್ ಹೇಳುತ್ತಾರೆ–

ಜೊತೆಯಾಗಿ ಕೂತು ಆಹಾರ ಹಂಚಿ ತಿಂದ ಸಹ ಕೈದಿಗಳು ಕೂಡ ಹಿಂದಿನಿಂದ ನನ್ನನ್ನು ಭಯೋತ್ಪಾದಕನೆಂದು ಕರೆಯುವುದು ಕೇಳಿಸಿಕೊಂಡೆ. ಈ ಪ್ರಚಾರ ಬೇರೆಯವರ ಕಣ್ಣಲ್ಲಿ ನನ್ನನ್ನು ಒಬ್ಬ ಮನುಷ್ಯನಲ್ಲದಂತೆ ಮಾಡುತ್ತಿದೆ. ನನ್ನಂತಹವರಿಗೆ ಮಾನವೀಯ ಪರಿಗಣನೆ ಎಂಬುದು ಒಂದು ದೊಡ್ಡ ಭಾಗ್ಯ ವಾಗಿದೆ. ಅದು ಎಲ್ಲರಿಗೂ ಸಿಗುವಂತಹದ್ದಲ್ಲ.

ಇದು ಉಮರ್ ಖಾಲಿದ್ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತು. ಉಮರ್ ಖಾಲಿದ್ ಸಿಎಎ ವಿರುದ್ಧ ಪ್ರೊಟೆಸ್ಟ್ ಮಾಡಿದ ಕಾರಣಕ್ಕಾಗಿ ಆರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

ಹೌದು ಈ ಹೋರಾಟದ ಕಾರಣಕ್ಕಾಗಿ ಭಯೋತ್ಪಾದಕ ಎಂಬ ಅಪ ಪ್ರಚಾರ ಅವರ ವಿರುದ್ಧ ನಡೆಯುತ್ತಿದೆ ಎಂಬುದು ಸತ್ಯ. ನ್ಯಾಯ ಮತ್ತು ಪ್ರಜೆಗಳ ಪರ ಧ್ವನಿ ಎತ್ತಿದ್ದಕ್ಕಾಗಿ ಕೋರ್ಟಿನಿಂದಲೂ ಪದೇ ಪದೇ ಜಾಮೀನು ನಿರಾಕರಿಸಲ್ಪಡುತ್ತಿದೆ. ಬಹುಶಃ ಮುಸ್ಲಿಂ ಎಂಬ ಕಾರಣದಿಂದ ದಿಲ್ಲಿ ಪೊಲೀಸರು ಅವರಿಗೆ ಕೋರ್ಟಿನಿಂದ ಜಾಮೀನು ಸಿಗದಂತೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇರಲಿ,

ಈಗ ಬುಲ್ಡೋಜರ್ ಕಾರ್ಯಾಚರಣೆ, ಅಕ್ರಮ ವಸತಿವಾದ, ಜಾಗ ಪ್ರಾಧಿಕಾರಕ್ಕೆ ಸೇರಿದ್ದು, ಮನೆ ಕಟ್ಟಲು ಲೈಸೆನ್ಸ್ ಪಡೆದಿಲ್ಲ ಎಂಬಿತ್ಯಾದಿ ಮುಸ್ಲಿಮರ ವಿರುದ್ಧ ಹತ್ತು ಹಲವು ಸಬೂಬುಗಳು.

ಇದರಿಂದ ಮುಸ್ಲಿಮರು ಮತ್ತು ದಟ್ಟದರಿದ್ರರ ಬದುಕನ್ನೇ ಚಿಂದಿ ಮಾಡಲಾಗಿದೆ ಮತ್ತು ಮಾಡಲಾಗುತ್ತಿದೆ. ಈ ಕಾರ್ಯಾಚರಣೆಗಳು ಮುಸ್ಲಿಂ ಅಸ್ಮಿತೆ, ಅಸ್ತಿತ್ವವ ವನ್ನು ಕೆಡಹುವ ಗುರಿ ಇಟ್ಟುಕೊಂಡಿದೆ. ಎಸ್‌ಐಆರ್ ನಿಂದ ಕೋಟ್ಯಂತರ ಮಂದಿಯ ವೋಟಿಂಗ್ ಹಕ್ಕುಗಳು ಡೆಮಲೈಸ್ಡ್ ಆಗಿದೆ.

ಇದು ಹಿಂದುತ್ವ ರಾಜಕೀಯದ ಮುಸ್ಲಿಂ ಬೇಟೆ:

ಹೌದು ಮುಸ್ಲಿಂ ಬೇಟೆ ಅಂದರೆ ತಪ್ಪಿಲ್ಲ. ಉಮರ್ ಖಾಲಿದ್, ಶಾರ್ಜಿಲ್ ಇಮಾಮ್‌ರಂತಹ ಮುಸ್ಲಿಂ ವಿದ್ಯಾರ್ಥಿ ಹೋರಾಟಗಾರರು ಒಂದು ಕಡೆ ಇಂಥ ದುರ್ಗತಿಗೆ ನೂಕಲ್ಪಡುತ್ತಿದ್ದಾರೆ. ನ್ಯಾಯ ನಿರಾಕರಿಸಲ್ಪಟ್ಟರೆ ಪ್ರಜೆಗಳಿಗೆ ಆಶ್ರಯ ಎಲ್ಲಿರುತ್ತದೆ. ಇದೇ ವೇಳೆೆ, ಇನ್ನೊಂದು ಕಡೆ ಮಸೀದಿ, ಮದ್ರಸ, ಈದ್‌ಗಾಹ್, ದರ್ಗಾಗಳನ್ನು ಕೆಡಹುವ ಕಾರ್ಯತಂತ್ರವೂ ಶುರು ಆಗಿದೆ. ಕಳೆದ ಒಂದೂವರೆ ತಿಂಗಳಿAದೀಚೆಗೆ ಬಿಜೆಪಿ ಆಡಳಿತದ ವಿವಿಧ ರಾಜ್ಯಗಳಲ್ಲಿ ಬುಲ್ಡೋಝಿಂಗಿಗೊಳಗಾಗಿದ್ದು ಮಸೀದಿ, ದರ್ಗಾಗಳ ಸಹಿತ 23ರಕ್ಕೂ ಹೆಚ್ಚು ಮುಸ್ಲಿಮರ ಸ್ಥಳಗಳು. ಇವೆಲ್ಲ ಯಾಕೆ ಅಂದರೆ ಮುಸ್ಲಿಮರ ಅಸ್ಮಿತೆಯನ್ನು ನಾಶ ಮಾಡುವುದಕ್ಕೆ. ನೆಲಸಮ ಮಾಡಿ ಹಿಂದುತ್ವಕ್ಕೆ ಗ್ರೌಂಡ್ ಕ್ಲೀನ್ ಮಾಡುವುದು.

ಮುಸ್ಲಿಂ ಡೆಮಲೇಶನ್ ಮತ್ತು ಎಸ್‌ಐಆರ್:

ಹೌದು ಚುನಾವಣಾ ಆಯೋಗದ ಎಸ್‌ಐಆರ್ ಮೂಲಕ ಮುಸ್ಲಿಮರ ಡೆಮಲೇಶನ್ ನಡೆಸುತ್ತಿದೆ ಎಂಬ ಸಂಶಯ ಇಂದು ದಟ್ಟವಾಗಿದೆ. ಎಸ್‌ಐಆರ್ ನಡೆದಿರುವ ರಾಜ್ಯಗಳಲ್ಲಿ ತಲೆತಲಾಂತರದಿಂದ ವೋಟು ಹಾಕುತ್ತಾ ಬಂದಿದ್ದ ಲಕ್ಷಾಂತರ ಫ್ಯಾಮಿಲಿಗಳನ್ನು ವೋಟು ಹಕ್ಕಿನಿಂದ ವಂಚಿಸಿದ್ದು ಯಾಕೆ? ಕೋರ್ಟು ಕೂಡ ಅವರ ರಕ್ಷಣೆಗೆ ನಿಂತತೆ ಕಂಡು ಬರುತ್ತಿಲ್ಲ. ಎಸ್‌ಐಆರ್ ನಡೆದ ರಾಜ್ಯಗಳಲ್ಲಿ ಬಿಜೆಪಿಯೇ ಗೆಲ್ಲುತ್ತಿರುವುದರಿಂದ ಎಸ್‌ಐಆರ್ ಬಿಜೆಪಿ ಗೆಲ್ಲಿಸುವುದಕ್ಕಾಗಿದೆ. ಬಿಜೆಪಿ ಗೆದ್ದರೆ ಮುಸ್ಲಿಮರ ವಿರುದ್ಧ ಕಾರ್ಯಾಚರಣೆಗಳು ಸಲೀಸಾಗುತ್ತದೆ. ಬಿಜೆಪಿ ಅಧಿಕಾರದಲ್ಲಿರುವಲ್ಲಿ ಮುಸ್ಲಿಮರ ವಿರುದ್ಧ ಇರುವ ಅಗ್ರೆಸ್ಸಿವ್ ವಾತಾವರಣವೇ ಇದಕ್ಕೆ ಸಾಕ್ಷಿಯೂ ಆಗಿದೆ. ಈಗ ಕರ್ನಾಟಕದಲ್ಲಿ ಎಸ್‌ಐಆರ್ ಆರಂಭವಾಗಿದೆ. ಮುಸ್ಲಿಮರಲ್ಲದವರ ಹೆಸರು ವೋಟರ್ ಲೀಸ್ಟ್‌ನಿಂದ ಹೋದರೂ ಎನ್‌ಆರ್‌ಸಿ ಮೂಲಕ ಪ್ರಜೆಗಳಲ್ಲ ಎಂದೇ ಆಗಿಬಿಟ್ಟರೂ ಅವರಿಗೆ ಸಿಎಎ ಕಾನೂನು ಪೌರತ್ವ ಕೊಡುತ್ತದೆ. ಸಿಎಎ ಒಂದರ್ಥದಲ್ಲಿ ಮುಸ್ಲಿಮರ ವಿರುದ್ಧ ಸೇಡು ತೀರಿಸಲು ತಂದ ಅಜೆಂಡ ಆಗುವುದೇ ಇಲ್ಲಿ.

ಛತ್ತೀಸ್‌ಗಡದ ಬಡವರ ಡೆಮಲೇಶನ್:

ಬಿಜೆಪಿಯ ಸರಕಾರ ಬಡವರ ಅಸ್ತಿತ್ವದ ಡಮಲೇಶ ನ್‌ಗೂ ಉತ್ಸುಕವಾಗಿರುತ್ತದೆ. ಇದಕ್ಕೆ ಇತ್ತೀಚೆಗಿನ ಒಂದು ಉದಾಹರಣೆ ತೆಗೆದುಕೊಳ್ಳಿ. ಛತ್ತೀಸ್‌ಗಢದಲ್ಲಿ 80ಕ್ಕೂ ಹೆಚ್ಚು ಮನೆಗಳನ್ನು ಕೆಡವಿ ಹಾಕಲಾಗಿದೆ.

ಅಲ್ಲಿ ವಿಧಾಯಕ್ ಕಾಲನಿ(ಎಂಎಲ್‌ಎಗಳ ಕಾಲನಿ) ನಿರ್ಮಿಸುವುದು ಸರ್ಕಾರದ ಉದ್ದೇಶ. ನಖಿ ಗ್ರಾಮದಲ್ಲಿ ಶಾಸಕರಿಗೆ ಮನೆಕಟ್ಟಿಸಲು ಹೊರಟಿದ್ದರಿಂದ 80 ಮನೆ ಗಳು ನೆಲಸಮ! ಇದರ ವಿರುದ್ಧ ಜನರು ಪ್ರತಿಭಟಿಸಿದ್ದಾರೆ. ಆದರೆ ಅವರ ಧ್ವನಿ ಕೇಳುವವರು ಯಾರಿ ದ್ದಾರೆ? ಇವರನ್ನು ಅಭಿವೃದ್ಧಿಗೆ ಅಡ್ಡಿ ಎಂದು ಸರಕಾ ರಕ್ಕೆ ನಮೂದಿಸಲು ಕಷ್ಟ ಉಂಟಾ? ಬಿಜೆಪಿಯ ಪವರ್ ಪಾಲಿಟಿಕ್ಸ್ ಮುಂದೆ ಜನರ ಹೋರಾಟ ವಿರೋಧಗಳು ಅಸ್ವಾಹಾ ವಿಸ್ವಾಹಾ ದುಸ್ಸಾಹಸವಾಗಿದೆ.

ಆದರೆ ಬಿಜೆಪಿ ತಾವು ಮಾಡಿದ್ದೇ ಸರಿ ಎಂದು ಬಿಂಬಿಸುವ ಪ್ರಚಾರಕ್ಕೆ ಹಲವು ಲಕ್ಷ ಮಂದಿಯ ಪಡೆಯನ್ನೇ ಸಂಘಿ ಅಜೆಂಡ ರೂಪಿಸಿರುತ್ತದೆ. ಹೀಗಾಗಿ ಎಷ್ಟೇ ವಿರೋಧ ಇದ್ದರೂ ದಮನ ನೀತಿ ಸಲೀಸಲಾಗಿ ನಡೆದು ಬಿಡುತ್ತದೆ.

ರಾಜಸ್ಥಾನದ್ದು ಇನ್ನೊಂದು ಕತೆ:

ರಾಜಸ್ಥಾನದ ಬದೋನಿ ಜಿಲ್ಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶದಂತೆ ಮಸೀದಿ ದರ್ಗಾ ಸಹಿತ ಮುಸ್ಲಿಮರ ಧಾರ್ಮಿಕ ಕೇಂದ್ರಗಳನ್ನು ಕೆಡಹುವ ಯಜ್ಞವೇ ಶುರುವಾಗಿದೆ.

ಮೇ 27ಕ್ಕೆ ಜೈಪುರಕ್ಕೆ ಬಂದ ಅಮಿತ್ ಶಾ, ಬಿಕಾನೇರ್, ಜೈಸಲ್ಮೇರ್, ಬಾರ್ಮರ್, ಶ್ರೀಗಂಗಾ ನಗರ, ಫಾಲೊಡಿಗಳ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮತ್ತು ಎಸ್ಪಿಗಳನ್ನು ಕರೆಯಿಸಿಕೊಂಡು ಸಭೆ ನಡೆಸಿದರು. ಆನಂತರ ಪಾಕಿಸ್ತಾನ ಗಡಿಯ 15 ಕಿಲೋ ಮೀಟರ್ ವ್ಯಾಪ್ತಿಯ ಎಲ್ಲ ಅನಧಿಕೃತ ಕಟ್ಟಡಗಳನ್ನು ಕೆಡಹುವ ಕಾರ್ಯ ಪ್ರಾರಂಭವಾಗಿದೆ. ವಿಶೇಷ ಅಂದರೆ ಮಸೀದಿ, ದರ್ಗಾ ಗಳನ್ನು ಕೆಡಹಲು ರಾಜಸ್ಥಾನದ ಬಿಜೆಪಿ ಸರಕಾರ ಆವೇಶದಿಂದ ಕಾರ್ಯತತ್ಪರವಾಗಿದೆ. ಇವರ ಪ್ರಕಾರ ದೇಶ ಸುರಕ್ಷೆಗೆ ಈ ಕಟ್ಟಡಗಳು ಅಪಾಯಕಾರಿ. ಬಿಜೆಪಿಯ ಪ್ರತಿಯೊಂದೂ ಕಾರ್ಯಾಚರಣೆ ಮುಸ್ಲಿಮ್ ದ್ವೇಷದಿಂದ ಕೂಡಿರುತ್ತದೆ. ಹೆಸರು ದೇಶ ಸುರಕ್ಷೆಯದ್ದು:

ರಾಜಸ್ಥಾನದ ಮಸೀದಿ ಕೆಡಹುವ ಕಾರ್ಯಾಚರಣೆ ವಿರುದ್ಧ ಅಸದುದ್ದೀನ್ ಉವೈಸಿ, ನಾಗರಿಕ ಹಕ್ಕು ಸಂಘಟನೆ ಎಪಿಸಿಆರ್ ಮತ್ತು ಇತರ ಸ್ವಯಂ ಸೇವಾ ಸಂಘಟನೆಗಳು ಕಾನೂನು ಹೋರಾಟಕ್ಕಿಳಿದರೂ ಪ್ರಯೋಜನ ಆಗುವ ಸಾಧ್ಯತೆಗಳಿಲ್ಲ.

ಉತ್ತರಪ್ರದೇಶದ ಮುಸ್ಲಿಮರ ಕತೆ, ವ್ಯಥೆ:

ಉತ್ತರ ಪ್ರದೇಶದ ಸಾವಿರ ವರ್ಷ ಹಳೆಯ ಗಂಜ್ ಶಾಹಿದಾನ್ ಮಸೀದಿಗೆ ಜೂನ್ 13ಕ್ಕೆ ಡೆಮಲೇಶನ್ ನೋಟಿಸಿ ಕೊಡಲಾಗಿದೆ. ನೋಟಿಸಿನಲ್ಲಿ ತಿಳಿಸಿದ ಕಾರಣ ರೈಲು ನಿಲ್ದಾಣ ವಿಸ್ತರಣೆ. ಒಂದು ವಾರದಲ್ಲಿ ಮಸೀದಿಯನ್ನು ಮುಸ್ಲಿಮರು ಬಿಟ್ಟು ಕೊಡಬೇಕು. ಸಾವಿರ ವರ್ಷದಿಂದ ಪ್ರಾರ್ಥನೆ ಸಲ್ಲಿಸುತ್ತಾ ಬಂದ ಮಸೀದಿ 12 ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸರಕಾರ ಉಡಾಯಿಸುವ ನೋಟಿಸು ಕೊಟ್ಟಿದೆ. 1624-25ರಲ್ಲಿ ಮಸೀದಿ ಕಟ್ಟಿಸಲಾಗಿತ್ತು. 1883-84ರ ಬನಾಸರ್ ಸೆಟಲ್‌ಮೆಂಟ್ ಮ್ಯಾಪ್‌ನಲ್ಲಿದೆ. ಅಲ್ಲಿ ರೈಲ್ವೆಸ್ಟೇಶನ್ ಆದದ್ದು 1887ರಲ್ಲಿ. 1967ರಲ್ಲಿ ವಕ್ಫ್ ಬೋರ್ಡಿನಲ್ಲಿ ಮಸೀದಿ ರಿಜಿಸ್ಟರ್ಡ್‌ ಆಗಿದೆ. ಆದರೆ ಈಗ ಅದು ಅನಧಿಕೃತ ಕಟ್ಟಡ ಎಂದು ನೋಟಿಸು ನೀಡಲಾಗಿದೆ. ಈಗಿರುವವರು ಹುಟ್ಟೇ ಇಲ್ಲದ ಕಾಲದಲ್ಲಿ ನೋಂದಾಯಿಸಲ್ಪಟ್ಟ ಮಸೀದಿ ಕತೆ ಮುಗಿಸಲು ಹೊರಟದ್ದು ಮುಸ್ಲಿಮರ ಹಿಸ್ಟ್ರಿಯನ್ನೇ ಡೆಮಲೇಶನ್ ಮಾಡುವ ಉದ್ದೇಶದಿಂದ ಕೂಡಿದೆ. ಉತ್ತರಪ್ರದೇಶ, ರಾಜಸ್ಥಾನ ಮಾತ್ರ ಅಲ್ಲ, ದಿಲ್ಲಿ, ಮಹಾರಾಷ್ಟ್ರ, ಗುಜರಾತ್, ಹರಿಯಾಣಗಳಲ್ಲಿ ಮುಸ್ಲಿಂ ಆರಾಧನಾಲಯಗಳನ್ನು, ದರ್ಗಾಗಳನ್ನು ಕೆಡಹುವ ಪ್ರಕ್ರಿಯೆ ನಡೆಯುತ್ತದೆ.

25 ಕೋಟಿ ಜನರ ಸಂಸ್ಕೃತಿ, ಅಸ್ತಿತ್ವ ನಾಶ ಅಸಾಧ್ಯ:

ಎಂತಹ ಶಕ್ತಿಗಳಿಂದಲೂ ಇದು ಆಗುವುದಲ್ಲ. ಇಸ್ರೇಲ್ ಮತ್ತು ಗಾಝದ ಅವಸ್ಥೆ ನೋಡಿ. 99 ಪರ್ಸೆಂಟ್ ಮುಸ್ಲಿಮರು ಅಲ್ಲಿರುವುದು. ಅವರ ವಿಶ್ವಾಸವನ್ನು ನಾಶಪಡಿಸಲು ಹೊರಟು ಅರ್ಧ ಶತಮಾನ ಕಳೆಯಿತು. ಗಾಝ ಇರುವಲ್ಲಿದೆ. ಭೂಪಟವೂ ಅಲ್ಲಿದೆ. ಲಕ್ಷಾಂತರ ಮಂದಿ ಆಹುತಿಯಾದರೂ ಈ ಜನರ ಸ್ವಾತಂತ್ರ್ಯದಾಹ ಬತ್ತಿಲ್ಲ. ದಮನ ಶಕ್ತಿಯಾದ ಇಸ್ರೇಲ್ ಮುಖಭಂಗ ಅನುಭವಿಸುತ್ತಿದೆ. ಯಾಕೆ? ಹೌದು ಮುಸ್ಲಿಮರು ಮತ್ತು ಇಸ್ಲಾಮೀ ವಿಶ್ವಾಸದ ಸರ್ವನಾಶದ ಅಜೆಂಡ ಈ ಲೋಕಾಂತ್ಯದವರೆಗೂ ಅಂತ್ಯವಾಗುವುದಿಲ್ಲ. ಆದ್ದರಿಂದ ಬಿಜೆಪಿ ಸಂಘಿ ಅಜೆಂಡದ ಮುಂದೆ ಈವರೆಗೂ ಮುಸ್ಲಿಮರು ಮಂಡಿಯೂರಿಲ್ಲ. ಊರ ಬೇಕಾಗಿಲ್ಲ.

ಬಿಜೆಪಿ ಮತ್ತು ಪರಿವಾರ ಮುಸ್ಲಿಮರೊಂದಿಗೆ ಅವರ ವಿಶ್ವಾಸದ ನಾಶಕ್ಕೂ ಹವಣಿಸುತ್ತಿದೆ. ಅವರ ಹೋರಾಟ ಇತಿಹಾಸದ ನಿರ್ನಾಮಕ್ಕೂ ಹೊರಟಿದೆ.

ಹೌದು,

ಡೆಮಲೇಶನ್‌ಗಳಿಂದ ಈ ಸರಕಾರಗಳು ಮುಸ್ಲಿಮರಿಗೆ ಒಂದಷ್ಟು ನಷ್ಟ ಸಾವು ನೋವುಗಳಿಂದಾಚೆ ಏನೂ ಮಾಡಲು ಸಾಧ್ಯವಿಲ್ಲ. ರಾಜಸ್ಥಾನದಲ್ಲೇ ಡೆಮಲೇಶನ್‌ಗೆ ಪಾಕಿಸ್ತಾನ ಗಡಿ ಜಿಲ್ಲೆಗಳ 350 ಮಸೀದಿಗಳಿಗೆ ನೋಟಿಸು ನೀಡಲಾಗಿದೆ ಎಂದು ತಿಳಿಸುತ್ತದೆ. ಅಮೆರಿಕದ ಜಸ್ಟಿಸ್ ಫಾರ್ ಆಲ್ ಎಂಬ ಎನ್‌ಜಿವೊ ದ್ವೇಷ ರಾಜಕೀಯದ ಬಗ್ಗೆ ಎಚ್ಚರಿಕೆಯನ್ನು ಇತ್ತೀಚೆಗೆ ನೀಡಿತ್ತು. ಅದರಂತೆ ರಾಜಸ್ಥಾನದ ಜೈಸಲ್ಮೇರ್, ಬಿಕಾನೀರ್, ಶ್ರೀಗಂಗಾನಗರ್, ಬರ್ಮಾರ್ ಗಡಿ ಜಿಲ್ಲೆಗಳ ಹಿಂದೂಗಳು ಮುಸ್ಲಿಂ ಸಮುದಾಯದ ಜೊತೆ ನಿಂತಿದೆ. ಮಾತ್ರವಲ್ಲ ಸರಕಾರದ ಡೆಮಲೇಶನ್ ವಿರುದ್ಧ ಮುಸ್ಲಿಮರನ್ನು ಸೇರಿಸಿಕೊಂಡೇ ಪ್ರತಿಭಟನೆ ನಡೆಸುತ್ತಿದೆ. ಸಭೆ ಆಯೋಜಿಸಿದೆ. ಜಾಥಾ ವನ್ನೂ ನಡೆಸಿದೆ. ಅಕ್ರಮವನ್ನು ಅಕ್ರಮವೆಂದು ಜನ ಗುರುತಿಸುತ್ತಾರೆ. ಎಲ್ಲ ಕಾಲದಲ್ಲಿಯೂ ಅಂತಹವರಿದ್ದೇ ಇರುತ್ತಾರೆ. ಸತ್ಯ ಗೆಲ್ಲಬೇಕು. ಉಮರ್ ಖಾಲಿದ್‌ರ ಮಾತನ್ನು ಮತ್ತೊಮ್ಮೆ ಉಲ್ಲೇಖಿಸುವುದಾದರೆ–

“ಜೊತೆಯಾಗಿ ಕೂತು ಆಹಾರ ಹಂಚಿ ತಿಂದ ಸಹಕೈದಿಗಳು ಕೂಡ ಹಿಂದಿನಿಂದ ನನ್ನನ್ನು ಭಯೋತ್ಪಾದಕನೆಂದು ಕರೆಯುವುದನ್ನು ಕೇಳಿಸಿಕೊಂಡೆ. ಈ ಪ್ರಚಾರ ಬೇರೆಯವರ ಕಣ್ಣಲ್ಲಿ ನನ್ನನ್ನು ಒಬ್ಬ ಮನುಷ್ಯ ನಲ್ಲದಂತೆ ಮಾಡುತ್ತಿದೆ. ನನ್ನಂತಹವರಿಗೆ ಮಾನವೀಯ ಪರಿಗಣನೆ ಎಂಬುದು ಒಂದು ದೊಡ್ಡ ಭಾಗ್ಯವಾಗಿದೆ. ಅದು ಎಲ್ಲರಿಗೂ ಸಿಗುವಂತಹದ್ದಲ್ಲ…” ಆದರೆ ಯಾವ ಅಪಪ್ರಚಾರವೂ ಗೆಲ್ಲುವುದಿಲ್ಲ ಎಂಬುದು ಶತಸಿದ್ಧವಾದ ಸತ್ಯ. ಸತ್ಯಕ್ಕೆ ಅಳಿವಿಲ್ಲ. ನ್ಯಾಯ ಗೆದ್ದೇ ಗೆಲ್ಲುತ್ತದೆ.