ನಮಸ್ತೇ ಟ್ರಂಪ್ ಜಾತ್ರೆಗೆ ಬಂದ ವಿದೇಶಿಯರಲ್ಲಿ ಸೋಂಕಿತ್ತೇ? ಮೀಡಿಯಾವೇಕೆ ಮಾತಾಡಲ್ಲ? ಗುಜರಾತ್ ಏಕೆ ಸೋಂಕಿತರಲ್ಲಿ ಮುಂದಿದೆ?

0
1537

ಸನ್ಮಾರ್ಗ ವಾರ್ತೆ

ದಿನೇಶ್ ಕುಮಾರ್ ಎಸ್ ಸಿ

ಇಡೀ ದೇಶಕ್ಕೆ ‘ಗುಜರಾತ್ ಮಾದರಿ’ ಬೇಕು ಎಂದರು ಅವರು.‌ ಕೇರಳವನ್ನು ಸೊಮಾಲಿಯಾಗೆ ಹೋಲಿಸಿ ವಿಕೃತವಾಗಿ ನಕ್ಕರು. ಆದರೆ ಈಗೇನಾಗಿದೆ ನೋಡಿ. ಗುಜರಾತ್ ಕೋವಿಡ್-19 ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. 151 ಸಾವುಗಳು,‌ ಅದರಲ್ಲೂ‌ ಒಂದೇ ದಿನದಲ್ಲಿ 18 ಜೀವಗಳು ನೀಗಿಕೊಂಡಿವೆ.‌ ಹಾಗೆ‌ ನೋಡಿದರೆ ಅಧಿಕೃತವಾಗಿ ಮೊದಲು ಕರೋನಾ ಪ್ರವೇಶ ಮಾಡಿದ್ದೇ ಕೇರಳಕ್ಕೆ. ಅಲ್ಲಿನ ಸರ್ಕಾರ, ಜನರು ಒಂದಾಗಿ ಹೋರಾಡಿದರು. ಪರಿಣಾಮಕಾರಿ ಚಿಕಿತ್ಸೆಯಿಂದಾಗಿ ಅಲ್ಲಿ ಸತ್ತವರು ಕೇವಲ ನಾಲ್ಕು ಮಂದಿ. ಕರೋನಾ ಗ್ರಾಫ್ ಅಲ್ಲಿ ಇಳಿಮುಖವಾಗಿದೆ.

ಕೇರಳ ಫೆಬ್ರವರಿಯಲ್ಲಿ ಕೋವಿಡ್ ವಿರುದ್ಧ ಹೋರಾಟ ಶುರು‌ಮಾಡಿದ ಸಂದರ್ಭದಲ್ಲೇ ಗುಜರಾತ್ ನಲ್ಲಿ ಡೊನಾಲ್ಡ್ ಟ್ರಂಪ್ ಜಾತ್ರೆ ನಡೆಯುತ್ತಿತ್ತು. ಒಂದು ಲಕ್ಷ ಜನರನ್ನು ಸೇರಿಸಿ ನಡೆಸಿದ ನಮಸ್ತೇ ಟ್ರಂಪ್ ಜಾತ್ರೆಗೆ ಮೂರು ಸಾವಿರ ವಿದೇಶಿ ಗಣ್ಯರು ಬಂದಿದ್ದರು. ಅದರಲ್ಲಿ ಸೋಂಕು ಹೊತ್ತವರು ಎಷ್ಟು ಜನರಿದ್ದರೋ ಯಾರಿಗೆ ಗೊತ್ತು? ಇದನ್ನು ನಮ್ಮ ಮೀಡಿಯಾ ಹೇಳೋದಿಲ್ಲ. ಇಲ್ಲಿ ಹರಡಿದ ಸೋಂಕಿಗೆ ಒಂದು ಹೆಸರು ಕೊಡೋದಿಲ್ಲ. ಮೀಡಿಯಾ ಏನನ್ನು ಮುಚ್ಚಿಟ್ಟರೂ ಅಂಕಿಅಂಶಗಳನ್ನು ಮುಚ್ಚಿಡುವುದು ಕಷ್ಟ. ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಅಪಾಯದಲ್ಲಿ ಇರುವುದು ಗುಜರಾತ್. ಜನರು ಒಣಭಾಷಣಗಳಿಗೆ ಮರುಳಾಗಿದ್ದರ ಪರಿಣಾಮವಿದು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.