ಎಡಪಕ್ಷಗಳೊಂದಿಗೆ ಸಖ್ಯ: ಅಂತಿಮ ತೀರ್ಮಾನ ಸೋನಿಯಾ ಗಾಂಧಿಗೆ

0
716

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.28: ಪಶ್ಚಿಮ ಬಂಗಾಳ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗೆ ಸಹಕರಿಸುವ ಚರ್ಚೆಗೆ ಕಾಂಗ್ರೆಸ್ ಚಾಲನೆ ನೀಡಿದೆ. ಕಾಂಗ್ರೆಸ್ ರಾಜ್ಯ ನಾಯಕತ್ವ ರಾಹುಲ್ ಗಾಂಧಿಯನ್ನು ಈ ಕುರಿತು ಚರ್ಚಿಸಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕುರಿತು ಅಂತಿಮ ತೀರ್ಮಾನ ತಳೆಯುವರೆಂದು ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ರಾಹುಲ್ ಗಾಂಧಿಯನ್ನು ರಾಜ್ಯ ನಾಯಕರಾದ ಅಧೀರ್ ರಂಜನ್ ಚೌಧರಿ ಸಂಸದರು ಮತ್ತು ಶಾಸಕರು ಭೇಟಿಯಾಗಿ ಚರ್ಚಿಸಿದ್ದಾರೆ. ಎಡಪಾರ್ಟಿಗಳೊಂದಿಗೆ ಸಹಕರಿಸಿ ರಾಜ್ಯದಲ್ಲಿ ನಾಯಕರ ಒಕ್ಕೊರಲಿನಿಂದ ಎಡಪಕ್ಷಗಳೊಂದಿಗೆ ಸಹಕರಿಸಬೇಕೆಂದು ಆಗ್ರಹಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಚಟುವಟಿಕೆಗಳ ಬಗ್ಗೆಯೂ ಸಭೆಯಲ್ಲಿ ಅವಲೋಕನವನ್ನು ನಡೆಸಲಾಗಿದೆ.

ಚುನಾವಣೆಯ ಸಖ್ಯಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ರಾಜ್ಯ ಕಾಂಗ್ರೆಸ್ ನಾಯಕರು, ಎಡಪಕ್ಷಗಳ ನಾಯಕರು ಪರಸ್ಪರ ಅನಧಿಕೃತ ಚರ್ಚೆಗಳನ್ನು ಆರಂಭಿಸಿದ್ದರು. ಸಿಪಿಎಂ ಕೇಂದ್ರ ನೇತೃತ್ವ ರಾಜ್ಯ ಕಮಿಟಿಗೆ ಕಾಂಗ್ರೆಸ್‌ನೊಂದಿಗೆ ಸಖ್ಯದ ಕುರಿತು ಚರ್ಚೆ ನಡೆಸಿ ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿದೆ.