ಕೋಪೆನ್ ಹೇಗನ್, ಜೂ. 28: ಡೆನ್ಮಾರ್ಕಿನಲ್ಲಿ ಎಡಪಕ್ಷಗಳ ಕೂಟವು ಹೊಸ ಸರಕಾರ ರಚಿಸಿದ್ದು ಎಡಪಕ್ಷಗಳ ಬೆಂಬಲದಲ್ಲಿ ಸೊಶಿಯಲ್ ಡೆಮಕ್ರಾಟಿಕ್ ನಾಯಕಿ ಮೆಯ್ಟ ಫೆಡ್ರಿಕ್ಸ್ ನೇತೃತ್ವದಲ್ಲಿ ಹೊಸ ಸರಕಾರ ರೂಪುಗೊಂಡಿದೆ. ಇದರೊಂದಿಗೆ ದೇಶದಲ್ಲಿ ಅತಿ ಕಡಿಮೆ ವಯಸ್ಸಿನ ಪ್ರಧಾನಿಯಾಗಿ 41 ವರ್ಷದ ಫೆಡ್ರಿಕ್ ದಾಖಲೆ ಮಾಡಿದ್ದಾರೆ.
ಜೂನ್ ಐದಕ್ಕೆ ನಡೆದಿದ್ದ ಚುನಾವಣೆಯಲ್ಲಿ ಯಾರಿಗೂ ಬಹುಮತ ಇರಲಿಲ್ಲ. ನಂತರ ಸಖ್ಯ ಸರಕಾರ ರೂಪಿಸುವ ಕ್ರಮಕ್ಕೆ ಚಾಲನೆ ನೀಡಲಾಗಿತ್ತು. 179 ಸದಸ್ಯರ ಪಾರ್ಲಿಮೆಂಟಿನಲ್ಲಿ ಎಡಪಕ್ಷಗಳು 91 ಸೀಟುಗಳನ್ನು ಪಡೆದಿವೆ.
ವಲಸೆಗಾರರ ವಿರೋಧಿ ನೀತಿ ಹೊಂದಿರುವ ಡ್ಯಾನಿಶ್ ಪೀಪಲ್ಸ್ ಪಾರ್ಟಿ ಜೂನ್ ನಲ್ಲಿ ನಡೆದ ಚುನಾವಣೆಯಲ್ಲಿ ಕಳೆದ ಅವಧಿಗಿಂತ ಅರ್ಧಾಂಶ ಸೀಟುಗಳನ್ನು ಕಡಿಮೆ ಪಡೆದು ಕೊಂಡಿದೆ.












