ಇರಾನ್ ವಿದೇಶ ಸಚಿವರ ವಿರುದ್ಧ ಅಮೆರಿಕದ ದಿಗ್ಬಂಧನ: ವ್ಯಾಪಕ ಟೀಕೆ

0
419

ಟೆಹ್ರಾನ್, ಆ. 3: ಇರಾನ್ ವಿದೇಶ ಸಚಿವ ಜವಾದ್ ಸಾರಿಫ್ ವಿರುದ್ಧ ಅಮೆರಿಕ ದಿಗ್ಬಂಧ ಹೇರಿದ್ದು ಅಮೆರಿಕದ ಕ್ರಮದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜಾಗತಿಕ ದೇಶಗಳು ಮತ್ತು ವಿಶ್ವಸಂಸ್ಥೆ ಅಮೆರಿಕದ ಕ್ರಮವನ್ನು ಖಂಡಿಸಿವೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟಾರ್ನಿಯೊ ಗುಟರಸ್, ಚೀನದ ವಿದೇಶ ಸಚಿವಾಲಯ ವಕ್ತಾರ ಹುವಾ ಸುನಿಆಂಗ್, ರಷ್ಯದ ಡೆಪ್ಯುಟಿ ಖಾಯಂ ಪ್ರತಿನಿಧಿ ದಿಮಿತ್ರಿ ಪೊಲಿಯಾನ್‍ಸ್ಕಿ, ಫ್ರಾನ್ಸ್, ಬ್ರಿಟನ್, ಜರ್ಮನಿ ದೇಶಗಳು ಅಮೆರಿಕದ ಕ್ರಮವನ್ನು ಖಂಡಿಸಿದೆ. ಈ ಹಿಂದೆ ಜೂನ್ 24ರಂದು ಇರಾನ್ ವಿರುದ್ಧ ಅಮೆರಿಕ ದಿಗ್ಬಂಧನ ಹೇರಿ ಘೋಷಣೆ ಹೊರಡಿಸಿತ್ತು.