ಕಲ್ಲಿಕೋಟೆ, ಆ. 3: ಮಂಗಳವಾರ ಕೇರಳಾದ್ಯಂತ ಚಂದ್ರ ಕಂಡು ಬಂದಿಲ್ಲ, ಆದ್ದರಿಂದ ದುಲ್ಕಅದ್ 30 ಪೂರ್ತಿ ಮಾಡಿ ದುಲ್ಹಜ್ ಒಂದು ಆಗಸ್ಟ್ ಮೂರರಂದು ಆರಂಭವಾಗಿದೆ. ಅರಫಾ ಉಪವಾಸ ಆಗಸ್ಟ್ 11 ರವಿವಾರ ಇದೆ. ಈದುಲ್ ಅಝ್ಹಾ (ಬಕ್ರೀದ್) ಆಗಸ್ಟ್ 12 ಸೋಮವಾರ ಆಗಲಿದೆ ಎಂದು ಕೇರಳ ಹಿಲಾಲ್ ಕಮಿಟಿ ಅಧ್ಯಕ್ಷ ಎಂ. ಮುಹಮ್ಮದ್ ಮದನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಆಗಸ್ಟ್ ಎರಡರಂದು ಚಂದ್ರೋದಯವಾಗುವ ಸಾಧ್ಯತೆಯಿದ್ದು ಅದನ್ನು ನೋಡಿದವರು ತಿಳಿಸಬೇಕೆಂದು ವಿವಿಧ ಖಾಝಿಗಳಾದ ಪಾಣಕ್ಕಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್, ಸಮಸ್ತ ಕೇರಳ ಜಮ್ಇಯ್ಯತ್ತುಲ್ ಉಲಮಾ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್, ಕಲ್ಲಿಕೋಟೆ ಖಾಝಿಗಳಾದ ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಜಮಾಲ್ಲುಲಿಯವರು ವಿನಂತಿಸಿದ್ದರು.












