ಕಾಶ್ಮೀರ| ಮಾಜಿ ಸಿಎಂ ಪುತ್ರಿಯ ಅಪಹರಣ ಪ್ರಕರಣ: ಜೆಕೆಎಲ್‍ಎಫ್ ಮುಖ್ಯಸ್ಥ ಯಾಸೀನ್ ಮಲಿಕ್ ವಿರುದ್ಧ ಆರೋಪ

0
365

ಸನ್ಮಾರ್ಗ ವಾರ್ತೆ

ಜಮ್ಮು: ಮಾಜಿ ಕೇಂದ್ರ ಸಚಿವ, ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮುಹಮ್ಮದ್ ಸಈದ್‍ರ ಪುತ್ರಿ ರೂಬಿಯ ಸಈದ್‍ರನ್ನು ಅಪಹರಿಸಿದ ಪ್ರಕರಣದಲ್ಲಿ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಜೆಕೆಎಲ್‍ಎಫ್ ಮುಖ್ಯಸ್ಥ ಯಾಸೀನ್ ಮಲಿಕ್ ಮತ್ತು ಇತರ ಒಂಬತ್ತು ಮಂದಿಯ ವಿರುದ್ಧ ಟಾಡಾ ಕೋರ್ಟು ಆರೋಪ ಹೊರಿಸಿದೆ. ಸಈದ್ ಕೇಂದ್ರ ಗೃಹ ಸಚಿವರಾಗಿದ್ದಾಗ 1989 ಡಿಸೆಂಬರ್ 18ಕ್ಕೆ ರೂಬಿಯರ ಅಪಹರಣ ನಡೆದಿತ್ತು.

ಜೈಲಿನಲ್ಲಿದ್ದ ಜೆಕೆಎಲ್‍ಎಫ್ ಕಾರ್ಯಕರ್ತರ ಬಿಡುಗಡೆಗಾಗಿ ರೂಬಿಯರ ಅಪಹರಣ ನಡೆದಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಫಂಡ್ ಕೊಟ್ಟಿರುವ ಪ್ರಕರಣದಲ್ಲಿ 2019ರಲ್ಲಿ ಯಾಸೀನ್ ಮಲಿಕ್‍ರನ್ನು ಎನ್‍ಐಎ ಬಂಧಿಸಿದ್ದು ಈಗ ತಿಹಾರ್ ಜೈಲಿನಲ್ಲಿದ್ದಾರೆ. ನಾಲ್ವರು ವಾಯುಸೇನೆಯ ಸದಸ್ಯರನ್ನು ಗುಂಡಿಟ್ಟು ಕೊಲೆ ಮಾಡಿದ ಪ್ರಕರಣದಲ್ಲಿಯೂ ಮಲಿಕ್ ಆರೋಪಿಯಾಗಿದ್ದಾರೆ.