ಸೈಯ್ಯದ್ ತನ್ವೀರ್ ಹಾಶ್ಮಿಯವರ ವಿರುದ್ಧ ಯತ್ನಾಳ್‌ ಹೇಳಿಕೆ ಖಂಡನೀಯ; ಖಾಸಿಂ ಎ, ಕರ್ನಾಟಕ ಮುಸ್ಲಿಂ ಯುನಿಟಿ

0
171

ಸನ್ಮಾರ್ಗ ವಾರ್ತೆ

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಡಿಸೆಂಬರ್ 4 ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅಲ್ಲಿನ ಒಂದು ಚಿತ್ರವೊಂದನ್ನು ಇಟ್ಟುಕೊಂಡು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ‘ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಆರೋಪಿಸಿರುವುದು ಖಂಡನೀಯ.

ಈ ಕಪೋಲ ಕಲ್ಪಿತ ಸುಳ್ಳು ಹಾಗು ಮುಸ್ಲಿಂ ದ್ವೇಷಿ ಆರೋಪವನ್ನು ಕೆಲ ಮಾಧ್ಯಮಗಳು ಪೂರ್ವಾಪರವನ್ನು ಪರಿಶೀಲಿಸದೆಯೇ ಯತ್ನಾಳ್‌ ರ ಈ ಸುಳ್ಳು ಆರೋಪವನ್ನೇ ದಾಳವಾಗಿಟ್ಟುಕೊಂಡು ನಿರಂತರ ಸುದ್ದಿ ಮಾಡುತ್ತಲೇ ಇರುವುದು ಶೋಚನೀಯ ಹಾಗೂ ಪತ್ರಿಕಾ ಧರ್ಮದ ವಿರೋಧಿಯಾಗಿದೆ.

ಸುನ್ನಿ ಜಮಾತ್‌ನ ಮುಖಂಡರು, ಹಿರಿಯ ಸಮಾಜ ಸೇವಕರು, ಜಾತ್ಯತೀತ ಮನೋಭಾವದ ಧಾರ್ಮಿಕ ಪಂಡಿತರು ಆಗಿರುವ ತನ್ವೀರ್ ಪೀರಾ ರವರ ಕುರಿತು ಯತ್ನಾಳರ ತೇಜೋವದೆ ಹೇಳಿಕೆಯನ್ನು ಕರ್ನಾಟಕ. ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸುತ್ತದೆ.

ಯತ್ನಾಳ್ ಅಪಪ್ರಚಾರ ಮಾಡುತ್ತಿರುವ ತನ್ವೀರ್ ಪೀರಾ ರವರ ಫೋಟೋಗಳಲ್ಲಿ ಒಂದು ಬಾಗ್ದಾದಿನ ಪ್ರಿನ್ಸ್‌ ಶೇಖ್‌ ಖಾಲಿದ್‌ ಅವರ ಜ್ಯೋತೆಗಿನ ಫೋಟೋ ಹಾಗೂ ಮತ್ತೊಂದು ಫೋಟೋದಲ್ಲಿ ಇರುವವರು ಇರಾಕ್‌ ಸರ್ಕಾರದ ಸೆಕ್ಯುರಿಟಿ ಆಫೀಸರ್‌ ಆಗಿರುವ ಸಜ್ಜಾದೇ ನಶೀನ್‌ ಹಜ್ರತ್‌ ಗೌಸ್‌ ಆಜಂ ರವರ ಜ್ಯೋತೆಗೆ ತನ್ವೀರ್ ಪೀರಾ ರವರು ಇರುವ ಹತ್ತು ವರ್ಷಗಳ ಹಿಂದಿನ ಫೋಟೋಗಳು. ಇವುಗಳನ್ನೇ ತಿರುಚಿ ಬಳಸಿ ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ತನ್ವೀರ್ ಪೀರಾರ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಅಪಪ್ರಚಾರದ ಹಿಂದೆ ಮುಸ್ಲಿಂ ವಿರೋಧಿ ಭಾವನೆ , ಶಾಂತಿ ಕದಡುವ ಉದ್ದೇಶ ಯತ್ನಾಳ್ ಹೊಂದಿದ್ದಾರೆ.

ಈ ಕೂಡಲೇ ಕರ್ನಾಟಕ ಸರಕಾರ ಬಿಜೆಪಿ ಸಚಿವ ಯತ್ನಾಳ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯಿಸುತ್ತಿದೆ.

ಜೊತೆಗೆ, ಇದೆ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಸ್ಲಿಮ್ ಸಮುದಾಯದ ರಕ್ಷಣೆ ನಮ್ಮ ಸರಕಾರದ ಜವಾಬ್ದಾರಿ ಹಾಗೂ ಮುಂದಿನ ದಿನಗಳಲ್ಲಿ ಅವರ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿಗಳನ್ನು ಮೀಸಲು ಇರಿಸುವುದಾಗಿ ಘೋಷಣೆ ಮಾಡಿದ್ದು ಸ್ವಾಗತಾರ್ಹ.

ಅಲ್ಲದೆ, ರಾಜ್ಯದಲ್ಲಿ ಮುಸ್ಲಿಮರ ಮೀಸಲಾತಿಯನ್ನು ಮರುಸ್ಥಾಪಿಸಬೇಕು. ಓಬಿಸಿಯೊಳಗಿನ ಮುಸ್ಲಿಮರ ಶೇ.4 ರಷ್ಟು ಇರುವ ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಿಸಬೇಕೆಂದು ಕೆಎಂಯು ಸರಕಾರಕ್ಕೆ ಒತ್ತಾಯಿಸುತ್ತಿದೆ.