ಆಕಿರಾ ಮತ್ತು ಆನರಾ: ಇದುವೇ ನನ್ನ ಭಾರತ- ಕ್ರಿಕೆಟಿಗ ಆಕಾಶ್ ಚೋಪ್ರ ಹೀಗೆ ಟ್ವೀಟ್ ಮಾಡಿದ್ದೇಕೆ?

0
685

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 29: ನಿಮ್ಮ ಭಾರತ ಎಂಬ ಆಶಯ ಇದುವೇ ಏನೋ ಎಂದು ಮಾಜಿ ಇಂಡಿಯನ್ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಸ್ನೇಹಾಲಿಂಗನದ ಇಮೋಜಿಯನ್ನು ಆಕಾಶ್ ಚೋಪ್ರ ಟ್ವೀಟ್ ಮಾಡಿದ್ದಾರೆ.

“ನನ್ನ ಮಗು ಆರನಾ ಅವಳ ಹುಟ್ಟುಹಬ್ಬವನ್ನು ಗೆಳತಿ ಆಕಿರಾಳೊಂದಿಗೆ ಹಂಚಿಕೊಳ್ಳುತ್ತಾಳೆ. ನಾವು ಹಲವು ವರ್ಷಗಳಿಂದ ಒಟ್ಟಿಗೆ ಪಾರ್ಟಿ ಮಾಡುತ್ತೇವೆ. ಅವರು ಒಂದೇ ರೀತಿ ಬಟ್ಟೆ ಧರಿಸುತ್ತಾರೆ. ಅವರು ಒಂದು ಕೇಕ್ ಕತ್ತರಿಸುತ್ತಾರೆ. ಕೆಲವೊಮ್ಮೆ ಜನ್ಮದಿನದಲ್ಲಿ ಅವರನ್ನು ನೋಡುವಾಗ ಒಂದೇ ರೀತಿ ಇರುತ್ತಾರೆ. ಯಾರು ಆಕಿರಾ, ಯಾರು ಆರಾನ ಎಂದು ಹೇಳುವುದೇ ಕಷ್ಟ.

ಅವರ ಹೆಸರಿನ ಕೊನೆಯಲ್ಲಿ ಚೋಫ್ರ, ವಿರಾನಿ ಎಂಬುದನ್ನು ಬಿಟ್ಟರೆ ಬೇರೆ ವ್ಯತ್ಯಾಸ ಇಲ್ಲ. ಆಕಿರ ಒಬ್ಬಳು ಮುಸ್ಲಿಂ ಎಂದು ಆರನಾಳಿಗೆ ಗೊತ್ತಿಲ್ಲ. ಆರನ ಒಬ್ಬಳು ಹಿಂದೂವೆಂದು ಆಕಿರಾಳಿಗೂ ಗೊತ್ತಿಲ್ಲ. ಎಲ್ಲ ವಿಷಯಗಳನ್ನು ಒಮ್ಮೆಯೂ ಅವರಿಗೆ ತಿಳಿಸಬೇಡಿ”.

ಬಹುತ್ವದಲ್ಲಿ ಏಕತ್ವ, ಶಾಂತಿ, ಪ್ರೀತಿ ಎಂಬ ಮಾತುಗಳ ಹಾಷ್ ಟ್ಯಾಗ್‍ಗಳೊಂದಿಗೆ ಆಕಾಶ್ ಚೋಪ್ರಾ ಈ ಟ್ವೀಟ್ ಮಾಡಿದ್ದಾರೆ.