ಮಮತಾ ಬ್ಯಾನರ್ಜಿಗಾಗಿ ಕರ್ನಾಟಕದ IGPಯನ್ನು ವರ್ಗಾವಣೆ ಮಾಡಲಾಗಿದೆಯೆಂದು  ಸುದ್ದಿ ಹರಡಿದ ಮುಖ್ಯವಾಹಿನಿ ಮಾಧ್ಯಮಗಳು: ನಿಜ ಏನು? 

0
1649

ಮೂಲ: Alt News Desk
ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಸಮಾಧಾನಕ್ಕೆ ಕಾರಣರಾದರೆಂದು ಹೇಳಲಾದ DGP ನೀಲಮಣಿ ರಾಜು ಅವರನ್ನು  ವರ್ಗಾವಣೆ ಮಾಡಲು  ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆದೇಶಿಸಿದ್ದಾರೆ ಎಂದು ಕನ್ನಡದ ನ್ಯೂಸ್ ಚಾನೆಲ್ Btv ಪ್ರಸಾರ ಮಾಡಿರುವುದನ್ನು ಯಾವ ಕ್ರಾಸ್ ಚೆಕ್ ನಡೆಸದೆಯೇ ಫೈನಾನ್ಶಿಯಲ್ ಎಕ್ಸ್ ಪ್ರೆಸ್, ಜೀ ನ್ಯೂಸ್ ಮತ್ತು DNA ಪತ್ರಿಕೆಗಳೂ ಪ್ರಸಾರ ಮಾಡಿದ್ವುವು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಭಾಗವಹಿಸಲು ಬಂದ ಮಮತಾ ಬ್ಯಾನರ್ಜಿಯರಿಗೆ IGP ಸೂಕ್ತವಾಗಿ ಸ್ಪಂದಿಸದ ಕಾರಣ ಈ ವರ್ಗಾವಣೆ ನಡೆದಿದೆ ಎಂದು ಇದಕ್ಕೆ ಕಾರಣವನ್ನು ಕೊಡಲಾಗಿತ್ತು. ಸಾಮಾಜಿಕ ತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿತ್ತು.

ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಬೀಳಿಸುವ ಪ್ರಯತ್ನವನ್ನು ಬಿಜೆಪಿ ಬೆಂಬಲಿಗರು ಈ ಸುದ್ದಿಯನ್ನು ಎತ್ತಿಕೊಂಡು ತೀವ್ರವಾಗಿ ಶ್ರಮಿಸಿದರು. ಕುಮಾರಸ್ವಾಮಿ ಮತ್ತು ಮಮತಾರನ್ನು ತಿವಿಯುವುದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯಿತು. ಬಲಪಂಥೀಯ ವೆಬಸೈಟ್ ಗಳಲ್ಲಿ ಒಂದಾದ Swarajya ದಂಥವು ಈ ಸುದ್ದಿಯನ್ನು ಹಂಚಿಕೊಂಡು ಪ್ರಚಾರಪಡಿಸಿತು.

ANI ವರದಿಗಾರ್ತಿ ಸ್ಮಿತಾ ಪ್ರಕಾಶ್ ಕೂಡ ಈ ಸುದ್ದಿಯನ್ನು ಶೇರ್ ಮಾಡಿಕೊಂಡರು. ನಿಜ ಏನೆಂದರೆ,  ಇಂಥದ್ದೊಂದು ವರ್ಗಾವಣೆಗೆ ಆದೇಶ ಆಗಿಯೇ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಆದನ್ನು ನೇರವಾಗಿ ಹೇಳಿದ್ದಾರೆ.

ಸಮಸ್ಯೆ ಏನೆಂದರೆ, ಸುದ್ದಿಯನ್ನು ಕ್ರಾಸ್ ಚೆಕ್ ಮಾಡದೆ ತಕ್ಷಣ ಘೋಷಿಸಿಬಿಡುವುದು. ವದಂತಿಯನ್ನೇ ಸತ್ಯಸುದ್ದಿಯಾಗಿ ಬಿಂಬಿಸಿಬಿಡುವುದು. ಕನಿಷ್ಠ ಸುದ್ದಿ ಪ್ರಕಟಿಸುವ ಕರ್ನಾಟಕ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದ್ದರೆ ಅಥವಾ ಮುಖ್ಯಮಂತ್ರಿಯವರ ಗೃಹ ಇಲಾಖೆಯನ್ನು ಸಂಪರ್ಕಿಸುತ್ತಿದ್ದರೆ ಸುಲಭದಲ್ಲೇ ಸತ್ಯ ಮಾನವರಿಕೆಯಾಗುತ್ತಿತ್ತು. ಆದರೆ, ಮಾಧ್ಯಮದ ಕೆಲವರಿಗೆ ಸತ್ಯಸುದ್ದಿಯ ಬಯಕೆಯಿಲ್ಲ. ಮೋದಿಯವರಿಗೆ ಅನುಕೂಲವಾಗುವ ಹಾಗೆ ಸುದ್ದಿಯನ್ನು ರಚಿಸಬೇಕು ಅಷ್ಟೇ. ನೀಲಮಣಿ ಯವರ ವಿಷಯದಲ್ಲಿ ನಡೆದಿರುವುದೂ ಇದುವೇ. ದುರಂತ ಏನೆಂದರೆ, ಮುಖ್ಯಧಾರೆಯ ಮಾಧ್ಯಮಗಳೂ ಈ ಬೇಜವಾಬ್ದಾರಿಯನ್ನು ಪ್ರದರ್ಶಿಸುವುದು.